ಮುಖವಾಡದ ಹಿಂದೆ ಭಯದ ವೈರಸ್ಸು

- ನಾಗೇಶ್ ಹೆಗಡೆ
ಹದಿನೇಳು ವರ್ಷಗಳ ಹಿಂದೆ 2003ರಲ್ಲಿ ಇದೇ ಕೊರೊನಾ ವೈರಸ್, ಇದೇ ಚೀನಾದ ಗ್ವಾಂಗ್ಡೊಂಗ್ ಎಂಬಲ್ಲಿ, ಇದೇ ರೀತಿ ಕಾಡುಪ್ರಾಣಿಗಳ ಮಾಂಸದ ಸಂತೆಯಲ್ಲಿ ಉದಯಿಸಿ ಬೀಜಿಂಗ್ ನಗರದಲ್ಲಿ ಪ್ರಳಯಾಂತಕ ರೂಪ ತಾಳಿತ್ತು. ಆಗಲೂ ಹೀಗೇ ಅದು ಅಲ್ಲಿಂದ 26 ದೇಶಗಳಿಗೆ ಹಬ್ಬಿ, ವಾಣಿಜ್ಯ ರಂಗದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿ ತಣ್ಣಗಾಗಿತ್ತು. ಆಗ ಅದನ್ನು ‘ಸಾರ್ಸ್’ ಎಂದು ಹೆಸರಿಸಿದ್ದರು. ‘ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್’ ಅರ್ಥಾತ್ ಉಸಿರಾಟಕ್ಕೆ ಸ
ಭಾರತದಲ್ಲಿ ಕೊರೊನಾ ವೈರಸ್‍ಗಿಂತ ಮುಖವಾಡ ಗಳ ಹುಚ್ಚೇ ಜೋರಾಗಿ ಹಬ್ಬುತ್ತಿದೆ. ವಾಸ್ತವ ಏನೆಂದರೆ, ಜ್ವರಪೀಡಿತ ವ್ಯಕ್ತಿಯೊಬ್ಬ ನಿಮ್ಮ ಮುಖದ ಬಳಿ ಬಂದು ಚುಂಬಿಸಿದರೆ ಅಥವಾ ಸೀನಿದರೆ ಮಾತ್ರ ಆ ಎಂಜಲಿನ ಮೂಲಕ ವೈರಸ್ ನಿಮಗೆ ಬಂದೀತು. ಸುಖಾಸುಮ್ಮನೆ ಅದು ಗಾಳಿಯಲ್ಲಿ ಹಾರುತ್ತಿರುವುದಿಲ್ಲ. ರೋಗಿಯೊಬ್ಬ ನೇರವಾಗಿ ಸೀನಿದರೆ ನೀವು ಮುಖವಾಡ ತೊಟ್ಟಿದ್ದರೂ ಅಷ್ಟೇನೂ ಪ್ರಯೋಜನವಿಲ್ಲ. ಏಕೆಂದರೆ ಕಣ್ಣುರೆಪ್ಪೆ, ಹಣೆ, ಕೆನ್ನೆ, ಕಿವಿಯ ಮೇಲೆ ವೈರಾಣು ಕೂತಿರಬಹುದು. ನೀವು ಮುಖ ಒರೆಸಿಕೊಂಡು ಬಸ್ ಹತ್ತುವಾಗ ನಿಮ್ಮ ಕೈಮೇಲಿದ್ದ ಅದು ಇನ್ನೊಬ್ಬರಿಗೆ ದಾಟಬಹುದು. ಸ್ವತಃ ನೀವು ರೋಗಿಯಾಗಿದ್ದರೆ ಅಥವಾ ಆಸ್ಪತ್ರೆಯ ಸಿಬ್ಬಂದಿ ಯಾಗಿದ್ದರೆ ಮುಖವಾಡವನ್ನು ಖಂಡಿತ ತೊಡಿ. ಹೊಗೆ-ದೂಳಿಗೂ ಅದು ಒಳ್ಳೆಯದೇ. ನಿಮಗೆ ಜ್ವರದ ಸೋಂಕು ಇಲ್ಲವಾಗಿದ್ದರೆ ಭಯದ ಮುಖವಾಡವನ್ನು ಬದಿಗಿಟ್ಟು ನಿಮ್ಮ ಕೈ ಬಾಯಿ ಶುದ್ಧ ಇಟ್ಟುಕೊಳ್ಳಿ (ಅದಂತೂ ಎಲ್ಲ ಅರ್ಥದಲ್ಲೂ ಎಲ್ಲ ಕಾಲದಲ್ಲೂ ಒಳ್ಳೆಯದು); ಸಾಮಾನ್ಯ ನೆಗಡಿ-ಜ್ವರ ಬಂದರೆ ಆಗಮಾತ್ರ ಕಡೆಗಣಿಸಬೇಡಿ; ಇಮ್ಮಡಿ ಹುಷಾರಾಗಿರಿ. ಕೊರೊನಾ ಬಗ್ಗೆ ವಿಶ್ವಸನೀಯ ಮಾಹಿತಿ ಬೇಕೆಂದರೆ ವಿಶ್ವ ಸ್ವಾಸ್ಥ್ಯ ಸಂಸ್ಥೆಯ (ವಿಸ್ವಾಸಂ W.H.O.) ಅಧಿಕೃತ ಜಾಲತಾಣಕ್ಕೆ ಹೋಗಿ. ಹೆಮ್ಮಾರಿಯಂತೆ ಈ ಹಬ್ಬುತ್ತಿರುವ ಭಯದ ವೈರಸ್ಸನ್ನು- ಅದು ಎಪಿಡೆಮಿಕ್ ಅಲ್ಲ, ‘ಇನ್�