ಬಜೆಟ್ ಮೇಲೆ ಮುಂದುವರಿದ ಚರ್ಚೆ; ಖಾಸಗಿ ಹೂಡಿಕೆ ಆಕರ್ಷಿಸುವ ಗುರಿ : ವಿತ್ತ ಸಚಿವೆ

2025-26ನೇ ಸಾಲಿನ ಕೇಂದ್ರ ಬಜೆಟ್ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಖಾಸಗಿ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿಂದು ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಮಾತನಾಡಿದ ಅವರು, ತುಂಬಾ ಕಷ್ಟದ ಸಮಯದಲ್ಲಿ ಈ ಬಜೆಟ್ ಅನ್ನು ಮಂಡಿಸಲಾಗಿದೆ ಎಂದರು.
ಸವಾಲುಗಳು ಹೆಚ್ಚು ತೀವ್ರತರವಾಗಿವೆ. ಇವುಗಳಲ್ಲಿ ಹೆಚ್ಚಿನವು ನಮ್ಮ ಅಂದಾಜು ಮತ್ತು ಮುನ್ಸೂಚನೆಗಳಿಗಿಂತ ದೂರ ಇವೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರ, ರಿಸರ್ವ್ ಬ್ಯಾಂಕ್ ಗುರಿಯ ಶೇಕಡ 4ರಷ್ಟು ಮಟ್ಟಕ್ಕೆ ಇಳಿಯುತ್ತಿದೆ. ಬೆಲೆ ಏರಿಕೆಯಿಂದ ಜನರಿಗೆ ಹೊರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಬಜೆಟ್ ನಲ್ಲಿ ಯಾವುದೇ ರಾಜ್ಯವನ್ನು ನಿರ್ಲಕ್ಷಿಸಿಲ್ಲ. ಬಿಜೆಪಿ ಆಡಳಿತ ರಾಜ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಿದರು.
ಭಾರತದ ಆರ್ಥಿಕತೆ ಶೇಕಡ 6.4ರಷ್ಟು ವೃದ್ಧಿಯಾಗುವ ಅಂದಾಜು ಮಾಡಲಾಗಿದೆ. ಆದ್ದರಿಂದ ಪ್ರಸಕ್ತ ಬಜೆಟ್ ನಲ್ಲಿ ಬೆಳವಣಿಗೆ ವೃದ್ಧಿ ಒಳಗೊಳ್ಳುವಿಕೆ ಅಭಿವೃದ್ಧಿ, ಖಾಸಗಿ ಹೂಡಿಕೆ, ಆಕರ್ಷಣೆ, ಮಧ್ಯಮ ವರ್ಗಗಗಳ ಖರೀದಿ ಸಾಮರ್ಥ್ಯ ಹೆಚ್ಚಳದ ಮೂಲಕ ಗುರಿಗಳ ಈಡೇರಿಕೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಬಡವರು, ಯುವಜನರು, ರೈತರು ಮತ್ತು ಮಹಿಳೆಯರ ಕಲ್ಯಾಣಕ್ಕೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಕೋವಿಡ್ ನಂತರದ ಅವಧಿಯಲ್ಲಿ ರಾಜ್ಯಗಳು ಸಾಲ ಪಡೆಯುವ ಪ್ರಮಾಣ ಹೆಚ್ಚಿದೆ. ಈ ಸಮಸ್ಯೆ ಇತರ ದೇಶಗಳ