ವಿಂಡೋಸ್ 10 ಫ್ರೀ ಅಪ್ಡೇಟ್ ಪಡೆದಿಲ್ವಾ? ತಡಾ ಮಾಡಿದ್ರೆ ಮಿಸ್ ಮಾಡ್ಕೊತಿರಿ

Posted by Suddi Reporter on in Category 49
1st Image

ನೀವು ವಿಂಡೋಸ್ 7 ಅಥವಾ ವಿಂಡೋಸ್ 8 ಬಳಕೆದಾರರಾಗಿದ್ದು  ಇನ್ನೂ ವಿಂಡೋಸ್ 10 ಫ್ರೀ ಅಪ್ಡೇಟ್ ಪದೆದುಕೊಂಡಿಲ್ವಾ?

ಹಾಗಿದ್ರೇ ನೀವು ತಡ ಮಾಡದೇ ಇಂದೇ ಫ್ರೀ ಅಗಿ ವಿಂಡೋಸ್ 10 ಗೆ ಅಪ್ ಗ್ರೇಡ್ ಆಗಿ. ಇಲ್ಲದಿದ್ದರೆ ಮಿಸ್ ಮಾಡಿಕೊಂಡೆ ಅಂತಾ ಕೊರಬೇಕಾದೀತು ಎಚ್ಚರ.

ಹೌದು, ಮೈಕ್ರೋಸಾಫ್ಟ್ ಕಳೆದ ಒಂದು ವರ್ಷದಿಂದ ವಿಂಡೋಸ್ 7, 8 & 8.1 ಬಳಕೆದಾರರಿಗೆ ಉಚಿತವಾಗಿ ವಿಂಡೋಸ್ 10 ನೀಡುತ್ತಿದೆ. ಈ ಕೊಡುಗೆ ಸೀಮಿತ ಅವಧಿಯದ್ದಾಗಿದ್ದು, ಇದೇ ಜುಲೈ 29 ಕ್ಕೆ ಕೊನೆಗೊಳ್ಳುತ್ತಿದೆ.

ಅಂದರೇ ನೀವು ಜುಲೈ 29ರ ಬಳಿಕ ಬೇಕು ಎಂದರೇ ಉಚಿತ ಸಿಗುವುದಿಲ್ಲ. ಬದಲಾಗಿ ನಿಗದಿತ ಹಣ ನೀಡಬೇಕಾಗುತ್ತದೆ. ಆದ್ದರಿಂದ ಮಿಸ್ ಮಾಡದೇ ಇಂದೇ  ವಿಂಡೋಸ್ 10 ಗೆ ಅಪ್ ಗ್ರೇಡ್ ಮಾಡಿಕೊಳ್ಳಿ.