ಡಬ್ಲ್ಯುಪಿಎಲ್ ೨೦೨೫: ಮೂರನೇ ಆವೃತ್ತಿಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಆರ್‌ಸಿಬಿ ಶುಭಾರಂಭ

ಮೂರನೇ ಆವೃತ್ತಿಯ ಡಬ್ಲ್ಯುಪಿಎಲ್ (WPL) ಇತಿಹಾಸದಲ್ಲೇ ಗರಿಷ್ಠ ರನ್ನುಗಳ ಚೇಸ್ ಮಾಡಿದ ತಂಡ ಎಂಬ ಗೌರವಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಪಾತ್ರವಾಗಿದೆ.
ಶುಕ್ರವಾರ ವಡೋದರಾದಲ್ಲಿ ನಡೆದ ಮಹಿಳಾ ಪ್ರಿಮಿಯರ್ ಲೀಗ್ ೨೦೨೫ ಮೂರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ನೀಡಿದ ಬೃಹತ್ತು ಮೊತ್ತದ ಸವಾಲನ್ನು ಆರ್‌ಸಿಬಿ ಮಹಿಳಾ ತಂಡ ೧೮.೩ ಓವರುಗಳಲ್ಲಿ ೬ ವಿಕೆಟುಗಳ ಐತಿಹಾಸಿಕ ಗೆಲು ದಾಖಲಿಸಿತು.
ಇದಕ್ಕೂ ಮೊದಲು ಗುಜರಾತ್ ತಂಡ ಆ್ಯಶ್ಲೆ ಗಾರ್ಡ್ನರ್ ಅವರು ಸಿಡಿಲಬ್ಬರದ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ ೩೭ ಎಸೆತಗಳಲ್ಲಿ ೩ ಬೌಂಡರಿ, ೮ ಸಿಕ್ಸರುಗಳ ನೆರವಿನಿಂದ ಅಜೇಯ ೭೯ ರನ್ನುಗಳ ನೆರವಿನಿಂದ ನಿಗದಿತ ೨೦ ಓವರುಗಳಲ್ಲಿ ೫ ವಿಕೆಟ್ ಕಳೆದುಕೊಂಡು ೨೦೧ ರನ್ನು ಕಲೆಹಾಕಿತು.
ಗುಜರಾತ್ ನೀಡಿದ ೨೦೨ ರನ್ನುಗಳ ದೊಡ್ಡ ಮೊತ್ತದ ಬೆನ್ನು ಹತ್ತಿದ ಆರ್‌ಸಿಬಿ ಹುಡುಗಿಯರು, ಆರಂಭಿಕ ಆಘಾತ ಅನುಭವಿಸಿದರು. ಆದರೆ, ಎಲಿಸ್ ಪೆರಿ ಮತ್ತು ರಿಚಾ ಘೋಷ್ ಎದುರಾಗಳಿ ಬೌಲರುಗಳ ಬೆವರಿಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೆರಿ ೩೪ ಎಸೆತಗಳಲ್ಲಿ ೬ ಬೌಂಡರಿ, ೨ ಸಿಕ್ಸರ್ ನೆರವಿನಿಂದ ೫೭ ರನ್ ಸಿಡಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರೆ, ರಿಚಾ ೨೭ ಎಸೆತಗಳಲ್ಲಿ ೬ ಬೌಂಡರಿ, ೪ ಸಿಕ್ಸರ್ ಸಹಿತ ಅಜೇಯ ೬೭ ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.
WPL ಗರಿಷ್ಠ ಚೇಸ್ ಮಾಡಿದ ಇತಿಹಾಸ
- ೨೦೨ ರನ್ - ಆರ್‌ಸಿಬಿ vs ಗುರಾತ್ ಜೈಂಟ್ಸ್, ವಡೋದರಾ, ೨೦೨೫
- ೧೯೧ ರನ್ - ಮುಂಬೈ ಇಂಡಿಯನ್ಸ್ vs ಗುರಾತ್ ಜೈಂಟ್ಸ್, ಡೆಲ್ಲಿ, ೨೦೨೪
- ೧೮೯ ರನ್ - ಆರ್‌ಸಿಬಿ vs ಗುರಾತ್ ಜೈಂಟ್ಸ್, ಬ್ರಬೋರ್ನ್, ೨೦೨೩
- ೧೭೯ ರನ್ - ಯಪಿ ವಾರಿಯರ್ಸ್ vs ಗುರಾತ್ ಜೈಂಟ್ಸ್, ಬ್ರಬೋರ್ನ್, ೨೦೨೩
- ೧೭೨ ರನ್ - ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು, ೨೦೨೪