ಲೋಕಸಭಾ ಸಂಸತ್ತಿನ ಉಭಯ ಸದನಗಳ ಕಲಾಪ ಮಾ.10ಕ್ಕೆ ಮುಂದೂಡಿಕೆ

Posted by editor on
1st Image

ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮಾರ್ಚ್ 10ಕ್ಕೆ ಮುಂದೂಡಲಾಗಿದೆ. ಜನವರಿ 31ರಂದು ಆರಂಭವಾದ ಬಜೆಟ್ ಅಧಿವೇಶನದ ಮೊದಲ ಭಾಗ ಇಂದಿನವರೆಗೆ ನಿಗದಿಯಾಗಿತ್ತು.

ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ, ಮೊದಲ ಭಾಗದ ಅಧಿವೇಶನ ಸುಗಮವಾಗಿ ನಡೆದಿದ್ದು, ತೃಪ್ತಿಕರವಾಗಿದೆ. ಉತ್ತಮ ವಾತಾವರಣದಲ್ಲಿ ಚರ್ಚೆಗಳು ಸದಸ್ಯರ ಸಹಕಾರದಿಂದ ನಡೆದಿವೆ ಎಂದರು.

ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ 17 ತಾಸು ನಡೆದಿದ್ದು, ಚರ್ಚೆಯಲ್ಲಿ 173 ಸದಸ್ಯರು ಭಾಗವಹಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ 170 ಸದಸ್ಯರು ಪಾಲ್ಗೊಂಡಿದ್ದರು.

ಒಟ್ಟಾರೆ ಸದನದ ಕಾರ್ಯಕಲಾಪ ಶೇಕಡ 112ರಷ್ಟು ಫಲಪ್ರದವಾಗಿದೆ ಎಂದರು.

Shabd