ಡೆಲ್ಲಿ ಕ್ಯಾಪಿಟ್ಸ್‌ಗೆ ರೋಚಕ ಜಯ, ಶುಭಾರಂಭದ ನಿರೀಕ್ಷೆಯಲ್ಲಿದ್ದ ಮುಂಬೈಗೆ ಆಘಾತ

Posted by editor on
1st Image

ವಡೋದರಾದ ಕೋಟಂಬಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನೆ ೨ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಡೆಲ್ಲಿ ತಂಡ ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್‌ ವಿರುದ್ದ ರೋಚಕ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

WPL ಎರಡನೇ ಪಂದ್ಯವು ರೋಚಕತೆಗ ಸಾಕ್ಷಿಯಾಯಿತು. ಮೊದಲ ಆವೃತ್ತಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಎರಡುಬಾರಿಯ ರನ್ನರ್‌ಅಪ್‌ ಡೆಲ್ಲಿ ಕ್ಯಾಪಿಟ್ಸ್‌ ಕೊನೆಯ ಎಸತದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಮೂರನೇ ಆವೃತ್ತಿಯ ಅಭಿಯಾನವನ್ನ ಆರಂಭಿಸಿದೆ.

ಅರುಂಧತಿ ರೆಡ್ಡಿ ಅಂತಿಮ ಎಸೆತದಲ್ಲಿ ೨ ರನ್ನು ಗಳಿಸುವ ಮೂಲಕ ತಂಡಕ್ಕೆ ೨ ವಿಕೆಟುಗಳ ಜಯ ತಂದುಕೊಟ್ಟರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡ, ನ್ಯಾಟ್ ಸ್ಕಿವರ್ ಬ್ರಂಟ್ ೮೦ (೫೯) ಮತ್ತುನಾಯಕಿ ಹರ್ಮನ್‌ಪ್ರೀತ್‌ ಕೌರ್ ೪೨ (೨೨) ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ೧೯.೧ ಓವರುಗಳಲ್ಲಿ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡು ೧೬೪ ರನ್‌ ಕಲೆಹಾಕಿತು.

೧೬೫ ರನ್ನುಗಳ ಸವಾಲಿನ ಮೊತ್ತ ಬೆನ್ನುಹತ್ತಿದ ಡೆಲ್ಲಿ ಹುಡುಗಿಯರ ಸಾಂಗಿಕ ಹೋರಾಟದ ಫಲವಾಗಿ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿ ಸಂಭ್ರಮಿಸಿದರು.