India Post

ಸರ್ಜಿಕಲ್ ದಾಳಿಯ ರಹಸ್ಯ ಬಿಚ್ಚಿಟ್ಟ ಮಾಜಿ ರಕ್ಷಣಾ ಸಚಿವರು

Posted by Suddi Reporter on
1st Image

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಗೆ ಒಬ್ಬ ಟಿವಿ ಆಂಕರ್ ಕಾರಣ ಎನ್ನುವ ರಹಸ್ಯವನ್ನ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬಿಚ್ಚಿಟ್ಟಿದ್ದಾರೆ. 

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ಮಯನ್ಮಾರ್ ಗಡಿಯೊಳಗೆ ಅಡಗಿ ಕುಳಿತಿದ್ದ ನಾಗಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಜೂನ್ 4, 2015ರಲ್ಲಿ ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಜನರನ್ನ ಹತ್ಯೆ ಮಾಡಲಾಗಿತ್ತು. ಆ ದಾಳಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತು ಎಂದರೇ ಯಾವುದೇ  ಒಂದು ತರಚು ಗಾಯವೂ ಇಲ್ಲದೆ ನಮ್ಮ ಸೈನಿಕರು ವಾಪಸ್ಸಾಗಿದ್ರು.

ಆದರೆ, ಸಂದರ್ಭದಲ್ಲಿ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ಖಾಸಗಿ ಟಿವಿ ಆಂಕರ್ ಒಬ್ಬರು, ಇದೇ ಕೆಲಸವನ್ನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾಡುವ ಧೈರ್ಯವಿದೆಯಾ ಎಂದು ಕೇಳಿದ ಪ್ರಶ್ನಿಸಿದ್ದು ತಮಗೆ ಅವಮಾನ ಎನಿಸಿತು.

ಹೀಗಾಗಿ, ಅವತ್ತೇ ದಾಳಿಗೆ ನಿರ್ಧರಿಸಲಾಯಿತು. ಸೂಕ್ತ ಸಮಯಕ್ಕಾಗಿ ಕಾಯ್ದು ಬರೋಬ್ಬರಿ 15 ತಿಂಗಳುಗಳ ಬಳಿಕ ದಾಳಿ ನಡೆಸಲಾಯಿತು ಎಂದು ಪಣಜಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಗೋವಾ ಸಿಎಂ, ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಹೇಳಿದ್ದಾರೆ.