ಮರಾಠಿ ಪುಂಡರ ವಿರುದ್ಧ ಘರ್ಜಿಸಿದ ಕನ್ನಡ ಪರ ಸಂಘಟನೆಗಳು, ಮಾರ್ಚ್ ೨೨ಕ್ಕೆ ʼಕರ್ನಾಟಕ ಬಂದ್ʼಗೆ ಕರೆ

ಬೆಂಗಳೂರು ಫೆ.28: ಬೆಳಗಾವಿಯಲ್ಲಿ ಕನ್ನಡಿಗ ಕೆಎಸ್‌ಆರ್‌ಟಿಸಿ (KSRTC) ಬಸ್ ಕಂಡಕ್ಟರ್ ಮೇಲೆ ಮರಾಠಿಗಳು ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ಕನ್ನಡ ಪರ ಸಂಘಟನೆಗಳು ಹೋರಾಟಗಾರ ವಾಟಾಳ ನಾಗರಾಜ ನೇತೃತ್ವದಲ್ಲಿ ಮಾರ್ಚ್ ೨೨ಕ್ಕೆ ʼಕರ್ನಾಟಕ ಬಂದ್ʼಗೆ ಕರೆ ನೀಡಿಲಾಗಿದೆ.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ಮಾರ್ಚ್ ತಿಂಗಳ ಪೂರ್ತಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲು ಮುಂದಾಗಿರುವ ಕನ್ನಡ ಪರ ಸಂಘಟನೆಗಳ ತೀರ್ಮಾನಕ್ಕೆ ಆಟೋ ಚಾಲಕರು, ಓಲಾ ಊಬರ್ ಟ್ಯಾಕ್ಸಿ ಡ್ರೈವರ್‌ಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಯಾವಾಗ ಏನೇನು ನಡೆಯಲಿದೆ?
- ಮಾರ್ಚ್ ೩ರಂದು - ರಾಜಭವನ ಮುತ್ತಿಗೆ
- ಮಾರ್ಚ್ ೭ರಂದು - ಬೆಳಗಾವಿ ಚಲೋಗೆ ಕರೆ
- ಮಾರ್ಚ್ ೧೧ರಂದು - ಮೇಕೆದಾಟು ಯೋಜನೆಗೆ ಆಗ್ರಹಿಸಿ ಅತ್ತಿಬೆಲೆ ಗಡಿ ಬಂದ್
- ಮಾರ್ಚ್ ೧೬ರಂದು - ಹೊಸಕೋಟೆ ಟೋಲ್ ಬಂದ್
- ಮಾರ್ಚ್ ೨೨ರಂದು - ಅಖಂಡ ಕರ್ನಾಟಕ ಬಂದ್ ಕರೆ
ಮಾರ್ಚ್ ೨೨ ರಂದು ಇಡೀ ಕರ್ನಾಟಕ ಸ್ತಬ್ದವಾಗಲಿದ್ದು, ಅಂದು ರಾಜ್ಯಾಧ್ಯಂತ ಬಸ್ ಸಂಚಾರ, ಹೋಟೆಲ್, ಆಟೋ, ಕ್ಯಾಬ್ ಸಂಚಾರ ಎಲ್ಲವೂ ಸಂಪೂರ್ಣ ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ತಿಳಿಸಿದರು.