India Post

ಕೆಎಸ್ಆರ್‌ಟಿಸಿ ಅತ್ಯುತ್ತಮ ಸೇವೆಗೆ ರಾಷ್ಟ್ರೀಯ ಸಾರ್ವಜನಿಕ‌ ಉದ್ದಿಮೆಗಳ ಪ್ರಶಸ್ತಿ

Posted by editor on
1st Image

ಬೆಂಗಳೂರು: ದೇಶದಲ್ಲೇ ಉತ್ತಮ ಸೇವೆಗೆ ಹೆಸರುವಾಸಿ ಆಗಿರುವ ಕರ್ನಾಟಕ ಸಾರಿಗೆ ನಿಗಮ (KSRTC) ಗೆ ಸಾರ್ವಜನಿಕ‌ ಉದ್ದಿಮೆಗಳ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

Governance Now ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ (ಭಾಆಸೇ), ಅವರಿಗೆ PSU  ಆತ್ಮ‌ನಿರ್ಭರ್ ನಾಯಕತ್ವ ಪ್ರಶಸ್ತಿಯನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವ ಸತೀಶ್ ಚಂದ್ರ ದುಬೆ ಪ್ರದಾನ‌ ಮಾಡಿದರು.

ನಿಗಮದಲ್ಲಿ ಒಟ್ಟು 1314 ಬಸ್ಸುಗಳು ಪುನಶ್ಚೇತನಗೊಂಡಿದ್ದು, ಕರ್ನಾಟಕ ಸಾರಿಗೆ 1184, ನಗರ ಸಾರಿಗೆ 115, ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳನ್ನು ಸಹ  ಪುನಶ್ಚೇತನಗೊಳಿಸಲಾಗಿದೆರೂ.250 ಕೋಟಿಗೂ ಹೆಚ್ಚು ಹಣ ನಿಗಮಕ್ಕೆ ಉಳಿತಾಯವಾಗಿದ್ದು, ಸದರಿ ಉಪಕ್ರಮವು
ಆತ್ಮನಿರ್ಭರ್ ಭಾರತ್  ಪರಿಕಲ್ಪನೆಯಡಿ ಸ್ವಾವಲಂಬನೆಯನ್ನು ಉತ್ತೇಜಿಸುವ ಯೋಜನೆಯು ಅತ್ಯುತ್ತಮವಾಗಿದೆ.

ಶ್ರೀ ಬಿ ಎಸ್ ನಾಗರಾಜ ಮೂರ್ತಿ, ಉಪಮುಖ್ಯ ಯಾಂತ್ರಿಕ ಅಭಿಯಂತರರು, ಕರಾರಸಾ ನಿಗಮ ರವರು ಸಹ ಉಪಸ್ಥಿತರಿದ್ದರು.