ಪೌರ ಕಾರ್ಮಿಕರಿಗೆ ಬಳ ಕೊಡದ ಬಿಬಿಎಂಪಿ ವಿರುದ್ಧ ಬಿಜೆಪಿ ಹೋರಾಟ
Posted by editor on

ಬೆಂಗಳೂರು: ಆರು ತಿಂಗಳಿಂದ ಸಂಬಳ ನೀಡದೇ ಪೌರಕಾರ್ಮಿಕನ ಆತ್ಮಹತ್ಯೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಬಿಬಿಎಂಪಿ ಆಡಳಿತ ಕಾರಣವಾಗಿದೆ ಎಂದು ಆರೋಪಿಸಿ ಮಲ್ಲೇಶ್ವರಂ ವಲಯ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿತು.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ಸಂಸದ ಪಿ.ಸಿ. ಮೋಹನ್ , ಬಿಬಿಎಂಪಿ ಸದಸ್ಯ ಪದ್ಮನಾಭರೆಡ್ಡಿ, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್. ಸದಾಶಿವ , ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ,ರಾಜ್ಯ ಬಿಜೆಪಿ ಸಹವಕ್ತಾರ ಎಸ್.ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಕಾರ್ಯಕರ್ತರು ಬಿಬಿಎಂಪಿಯ ದುರಾಡಳಿತವೇ ಇದಕ್ಕೆಲ್ಲ ಹೊಣೆ ಎಂದು ದೂರಿದರು. ಆರು ತಿಂಗಳಿಂದ ಸಂಬಳ ನೀಡದ ಕಾರಣ ಪೌರಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಗಮನಹರಿಸಬೇಕಾದ ಅಧಿಕಾರಿಗಳು, ಮೇಯರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಯುವಮೋರ್ಚಾ ನಗರ ಅಧ್ಯಕ್ಷ ಶ್ರೀ ಸಪ್ತಗಿರಿ ಗೌಡ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಮಲ್ಲೇಶರಂನ ದತ್ತಾತ್ತೇಯ ವಾರ್ಡ್ನಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗಿದ್ದ ಸುಬ್ರಮಣಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರುತಿಂಗಳಿನಿಂದ ಸಂಬಳ ದೊರೆಯದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿ ಮನೊಂದು ಆತ್ಮಹತ್ಯೆಗೆ ಸುಬ್ರಮಣಿ ಶರಣಾಗಿದ್ದಾರೆ ಎನ್ನಲಾಗಿದೆ. ಗುತ್ತಿಗೆ ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ , ಮೃತ ಸುಬ್ರಮಣಿ ಸೊಳ್ಳೆ ನಿಯಂತ್ರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಬಳಿಕ ಬಿಬಿಎಂಪಿಯಲ್ಲಿ ಗುತ್ತಿಗೆ ಪೌರಕಾರ್ಮಿಕನಾಗಿದ್ದ. ಪೌರಕಾರ