ರಾಮನಗರ ಜಿಲ್ಲೆಯಲ್ಲಿ ಮತ್ತೊಬ್ಬ ದರೋಡೆಕೋರನ ಕಾಲಿಗೆ ಗುಂಡೇಟು
Posted by editor on

ರಾಮನಗರ: ಸ್ಥಳ ಮಹಜರು ವೇಳೆ ಹಲ್ಲೆಗೆ ಮುಂದಾದ ರೌಡಿ ಶೀಟರ್ ಕಾಲಿಗೆ ರಾಮನಗರ ಪೊಲೀಸರು ಗುಂಡು ಹಾರಿಸಿದ್ದಾರೆ.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ಕೆಂಗೇರಿ ಬಳಿಯ ಹಳೆ ಬೈರೊಹಳ್ಳಿಯಲ್ಲಿ ಶೂಟೌಟ್ ನಡೆದಿದ್ದು, ಗಾಯಾಳು ರೌಡಿಶೀಟರ್ ಕಿರಣ್ ಹಾಗೂ ಪೇದೆ ವೀರಭದ್ರ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರವಷ್ಟೇ ಚನ್ನಪಟ್ಟಣ ಪೊಲೀಸರು ಸುಲಿಗೆ ಪ್ರಕರಣದ ಆರೋಪಿಗೆ ಗುಂಡು ಹಾರಿಸಿದ್ದರು. ದರೋಡೆ ಪ್ರಕರಣಕ್ಕೆ ಸಂಬಂಧ ಕುದೂರು ಪೊಲೀಸರು ಎಂಟು ಆರೋಪಿಗಳನ್ನ ಬಂಧಿಸಿದ್ದರು. ಪ್ರಕರಣದ ಮುಖ್ಯ ಆರೋಪಿ ಕಿರಣ್ ಅಲಿಯಾಸ್ ತಮಟೆಯನ್ನು ಸ್ಥಳ ಮಹಜರು ನಡೆಸಲು ಸೂಲಿಕೆರೆ ರಸ್ತೆ ಬಳಿಯ ಹಳೇ ಬೈರೊಹಳ್ಳಿಗೆ ಪೊಲೀಸರು ಕರೆದೊಯ್ದಿದ್ದಾರೆ. ಈ ವೇಳೆ ಪೇದೆ ವೀರಭದ್ರ ಎಂಬುವವರ ಮೇಲೆ ಹಲ್ಲೆ ನಡೆಸಿ ಕಿರಣ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಮಾಗಡಿ ಸಿಪಿಐ ಮಂಜುನಾಥ್ ಆತ್ಮರಕ್ಷಣೆಗೆಂದು ಸರ್ವಿಸ್ ರಿವಾಲ್ವರ್ ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಫೆ. 24ರಂದು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಲೋಕನಾಥ್ ಸಿಂಗ್ ಎಂಬುವರ ಮನೆಗೆ ನುಗ್ಗಿದ್ದ ತಂಡ ಮನೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದರೋಡೆ ನಡೆಸಿತ್ತು. ರೌಡಿಶೀಟರ್ ಕಿರಣ್ ಮೇಲೆ ತಾವರೆಕೆರೆ, ಬ್ಯಾಡರಹಳ್ಳಿ ಹಾಗೂ ಕೆಂಗೇರಿ ಪೊಲೀಸ್ ಠಾಣೆಯಲ್ಲಿ 11ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.