ಬಸವಣ್ಣ: ಬಿಜ್ಜಳನ ಮನದಾಳ
Posted by editor on

ನನ್ನ ಈ ಅರವತ್ತೆರಡು ವರ್ಷದ ಆಯುಸ್ಸಿನ್ಯಾಗ ಜಾತಿಯ ಹಂಗಿಲ್ಲದs ನನ್ನನ್ನ ಕಣ್ಣಾಗ ಕಣ್ಣಿಟ್ಟು ನೋಡಿದವ ಅಂದರ ಬಸವಣ್ಣ.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ಅವ- ಅವನ ಶರಣರು. ತಾಯಾಣೆ ಹೇಳತೀನಿ ಅವರು ಮಾತಾಡಿದರ ನಾನೂ ಒಬ್ಬ ಮನುಷ್ಯಾ ಅನಸತೈತಿ. ಜಾತಿ ಪದ್ದತಿಯನ್ನ ಈ ನಾಡಿನಿಂದ ಸವರಿ ಬಿಡತೀನಿ ಅನ್ನತಾನ. ವರ್ಣಾಶ್ರಮ ಧರ್ಮ ಬೇರುಸಹಿತ ಕಿತ್ತು ಹಾಕತೀನಿ ಅನ್ನತಾನ. ಎಂಥ ಕನಸದು! ಎಂಥ ಎದಿಗಾರಿಕಿ! ಅs ಟs ಅಲ್ಲ. ತನ್ನ ಸುತ್ತಮುತ್ತ ಎಂಥೆಂಥಾ ಮಂದೀನ ಕೂಡಿ ಹಾಕ್ಯಾನಂದೀ? ಅಲ್ಲಮ..... ಅವ ಮಾತಾಡೂದು ಕೇಳಿಲ್ಲ ನೀ! ಕನ್ನಡ ಅಲ್ಲ. ಅಮೃತದ ಸೆಲಿ. ಚನ್ನಯ್ಯ, ಜೇಡರ ದಾಸಿಮಯ್ಯ, ಅಕ್ಕ ಮಹಾದೇವಿ. ಒಬ್ಬರs ಇಬ್ಬರs? ಎಲ್ಲ ಒತ್ತಟ್ಟಿಗೆ ಕೂಡತಾರ, ಹಾಕ್ಯಾಡತಾರ, ಹಾಡತಾರ. ಇನ್ಯಾರ ಕೈಲಿ ಇದು ಸಾಧ್ಯ ಇತ್ತು? ಮತ್ತಿದನ್ನೆಲ್ಲಾ ಎಲ್ಲಿ ಮಾಡ್ಯಾನಂದಿ? ಬಿಜ್ಜಳನ ಕಲ್ಯಾಣದಾಗ. ಕಾಶ್ಮೀರದ ಅರಸ ಇಲ್ಲಿ ಬಂದರ ನನ್ನ ಓಲಗಕ್ಕೆ ಬರೋದಿಲ್ಲ. ನೆಟ್ಟಗ ಬಸವಣ್ಣನ ಮಹಾಮನಿಗೆ ಹೋಕ್ಕಾನು. ಸಣ್ಣ ಮಾತಾತs? - ಬಿಜ್ಜಳ ಗಿರೀಶ್ ಕಾರ್ನಾಡರ ತಲೆದಂಡ ನಾಟಕದಲ್ಲಿ. ಸಂಗ್ರಹ: ಬೂಕನಕೆರೆ ಮಂಜುನಾಥ