ಚುನಾವಣೆ ವೇಳೆ ತನಿಖಾ ಸಂಸ್ಥೆಗಳು ಕ್ರಿಯಾಶೀಲ: ಡಾ.ಮಹಾದೇವಪ್ಪ ಟೀಕೆ
Posted by editor on

ಬೆಂಗಳೂರು: ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿಯನ್ನು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ಸಿಬಿಐ ಮತ್ತು ಇಡಿಯಂತಹ ಸಂಸ್ಥೆಗಳು ಚುನಾವಣೆ ಮತ್ತು ಉಪ ಚುನಾವಣೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಕ್ರಿಯಾಶೀಲವಾಗಿದ್ದು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳದಂತಹ ವಾತಾವರಣ ರೂಪಿಸುತ್ತಾರೆ ಎಂದು ಮಹಾದೇವಪ್ಪ ಆರೋಪಿಸಿದ್ದಾರೆ. ದೇಶದ ಹಿತಕ್ಕಾಗಿ ಕೆಲಸ ಮಾಡಬೇಕಿದ್ದ ಸಿಬಿಐ ಹಾಗೂ ಇಡಿ ಅಂತಹ ಸಂಸ್ಥೆಗಳು ಸರ್ಕಾರದ ತನಿಖಾ ಸಂಸ್ಥೆಗಳೋ ಅಥವಾ ಬಿಜೆಪಿಯ ಅಂಗ ಸಂಸ್ಥೆಗಳೋ ಎಂಬ ಗೊಂದಲ ಮೂಡಿದೆ ಎಂದು ಅವರು ಕಿಡಿಕಾರಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಕೆಲಸಗಳನ್ನು ನಿಲ್ಲಿಸಿ ಬಹಳಷ್ಟು ಕಾಲವಾಗಿದೆ. ಈಗೇನಿದ್ದರೂ ಇವರು ಕರೋನಾ ಭ್ರಷ್ಟಾಚಾರ, ಪ್ರಚಾರ/ಅಪಪ್ರಚಾರ, ವಿರೋಧ ಪಕ್ಷದ ಮೇಲೆ ಚುನಾವಣಾ ಸಂದರ್ಭದಲ್ಲಿ ಸಿಬಿಐ ದಾಳಿಯ ಮೂಲಕ ದ್ವೇಷದ ರಾಜಕಾರಣ ಮಾಡುವುದು. ಧರ್ಮದ ಹೆಸರಲ್ಲಿ ವಿಷ ಬಿತ್ತುವುದನಷ್ಟೇ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.