India Post

ಉತ್ತರ ಕರ್ನಾಟಕ ಸಂಘಗಳ ಮಹಾಸಂಸ್ಥೆ ಪದಾಧಿಕಾರಿಗಳ ಅವಿರೋಧ ಆಯ್ಕೆ

Posted by editor on
1st Image

ಬೆಂಗಳೂರು: ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಶಿವಕುಮಾರ್ ಮೇಟಿ ಪುನರಾಯ್ಕೆಯಾಗಿದ್ದಾರೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ಉಪಾಧ್ಯಕ್ಷರಾಗಿ ಬಸವರಾಜ ಬೀಳೂರು, ನೆಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಪಾಗೋಜಿ, ಬಸಯ್ಯ ನಂದಿಕೋಲ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿಯಾಗಿ ತೋಟಪ್ಪ ಶೇಖ, ಖಜಾಂಚಿಯಾಗಿ ಜಯಪ್ರಕಾಶ ಜಾಲಿಗಿಡದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿವೃತ್ತ ಡಿಜಿಪಿ ಶಂಕರ ಬಿದಿಯವರು ಸಂಘದ ಗೌರವಾಧ್ಯಕ್ಷರಾಗಿ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಂಘ ತಿಳಿಸಿದೆ.