India Post

ವಿಧಾನಪರಿಷತ್ತಿಗೆ ಯೋಗ್ಯರನ್ನು ಆರಿಸಿ: ಸಿಎಂಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ

Posted by editor on
1st Image

ಬೆಂಗಳೂರು: ವಿಧಾನಪರಿಷತ್ತಿಗೆ ನಾಮನಿರ್ದೇಶನ ಹೊಂದುತ್ತಿರುವ ವ್ಯಕ್ತಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರತರವಾದ ಚರ್ಚೆಗೊಳಪಡುತ್ತಿದ್ದು, ನಾಮನಿರ್ದೇಶಿತ ಸ್ಥಾನಗಳಿಗೆ ಸಂವಿಧಾನದ ಮೂಲ ಆಶಯದಂತೆ ಸಾಮಾಜಿಕ ಹೊಣೆಗಾರಿಕೆಯುಳ್ಳ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪರಿಗಣಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ಶಕ್ತಿ ರಾಜಕೀಯದ ದುಷ್ಪರಿಣಾಮದಿಂದ ಮೇಲ್ಮನೆಯು ರಾಜಕೀಯ ಪಕ್ಷಗಳ ಹಿತಾಸಕ್ತಿ ಮತ್ತು ಒತ್ತಡಗಳನ್ನು ನಿವಾರಿಸುವ ಆಶ್ರಯ ತಾಣವಾಗುತ್ತಿರುವುದು ಬೇಸರ ಮೂಡಿಸಿದೆ. ಇದರಿಂದ ಗುಣಮಟ್ಟ ಕುಸಿಯುತ್ತಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಚಿಂತಕರ ಚಾವಡಿ, ಮೇಲ್ಮನೆ ಮತ್ತು ಹಿರಿಯರ ಮನೆ ಎಂದು ಕರೆಯಲ್ಪಡುವ ವಿಧಾನಪರಿಷತ್ತಿಗೆ ತನ್ನದೇ ಆದ ಘನತೆ ಹಾಗೂ ಹಿರಿಮೆ ಹೊಂದಿದ್ದು, ಇತ್ತೀಚೆಗೆ ಶಾಸಕರಲ್ಲಿ ಸಹ ಅಧ್ಯಯನ ಶೀಲ ಮನೋಭಾವ ಕಡಿಮೆ ಆಗುತ್ತಿದ್ದು, ಗುಣಾತ್ಮಕ ಚರ್ಚೆಗಳಲ್ಲಿ ಭಾಗವಹಿಸುವ ಉತ್ಸಾಹ ಕುಂಟಿತವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.