India Post

15ನೇ ಬೆಂಗಳೂರು ಚಿತ್ಸೋತ್ಸವಕ್ಕೆ ಕ್ಷಣಗಣನೆ : ಫೆ.29 ರಂದು ಸಿಎಂ ಅವರಿಂದ ಉದ್ಘಾಟನೆ

Posted by editor on
1st Image

ಬೆಂಗಳೂರು: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Biffes 2024)  ಫೆ. 29ರಂದು ಆರಂಭವಾಗಲಿದ್ದು, ಅಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಹೇಳಿದರು.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ಸೋಮವಾರ ವಾರ್ತಾ ಇಲಾಖೆಯ ಸಂಭಾಗಣದಲ್ಲಿ ಮಾತನಾಡಿದ ಅವರು, ಖ್ಯಾತ ಚಲನ ಚಿತ್ರ ಹಾಗೂ ರಂಗ ನಿರ್ದೇಶಕ ಡಾ. ಜಬ್ಬಾರ್ ಪಟೇಲ್ ಚಿತ್ರೋತ್ಸವದ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ನಟ ಡಾ. ಶಿವರಾಜ್ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಚೆಕ್ ರಿಪಬ್ಲಿಕ್ ರಾಷ್ಟ್ರದ ಚಲನ ಚಿತ್ರ ವಿಮರ್ಶಕ ವಿಯೆರಾ ಲಾಂಗೆರೊನಾ, ಬಾಂಗ್ಲಾದೇಶದ ನಟಿ ಅಜಮೇರಿ ಎಚ್. ಬಾಥೋನ್ ಹಾಗೂ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

180 ಚಿತ್ರಗಳ ಪ್ರದರ್ಶನ: ಚಲನ ಚಿತ್ರೋತ್ಸವದಲ್ಲಿ 50ಕ್ಕೂ ಹೆಚ್ಚು ದೇಶಗಳ 180 ಚಲನ ಚಿತ್ರಗಳು ಪ್ರದರ್ಶನವಾಗಲಿವೆ. ಕನ್ನಡ ಚಿತ್ರರಂಗ 90 ವರ್ಷ ಪೂರೈಸಿದ ಸಂದರ್ಭದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳ ಪ್ರದರ್ಶನ ಇದೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ಧಿಷ್ಟ  ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ. ಅದ್ಭುತ ಭಾರತ ನಮ್ಮ ಉತ್ಸವ ಅನನ್ಯ ವಿಭಾಗದಲ್ಲಿ ಕಡಿಮೆ ಮಂದಿ ಮಾತನಾಡುವ ಭಾರತೀಯ ಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ಈ ವಿಭಾಗದಲ್ಲಿ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ ಭಾಷೆಗಳ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಉದ್ಘಾಟನಾ ಚಿತ್ರವಾಗಿ ಸ್ಪಿಷ್ ಚಲನಚಿತ್ರ ಪೀಟರ್ ಲೂಸಿ ನಿರ್ದೇಶನದ ಬೋಂಜೂರ್ ಸ್ವಿಟ್ಜರ್ಲೆಂಡ್ ಪ್ರದರ್ಶನವಾಗಲಿದೆ. ವಿದೇಶದ 20 ಗಣ್ಯರು ಸೇರಿದಂತೆ 70 ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಮಾ. 7ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
 ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾತನಾಡಿ, ಈ ಚಲನಚಿತ್ರೋತ್ಸವ ಮೂಲಕ ಕನ್ನಡ ಸ್ವಾಭಿಮಾನವನ್ನು ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ.ಇದು ಕೇವಲ ಮನರಂಜನೆಯ ಉದ್ದೇಶವಲ್ಲ. ಮನೆ ಬಾಗಿಲಿಗೆ ಚಿತ್ರೋತ್ಸವವನ್ನು ಕೊಂಡೊಯ್ಯಲಾಗುತ್ತದೆ ಎಂದರು.

ಚಿತ್ರೋತ್ಸವ ಸಮಿತಿಯ ಕಲಾತ್ಮಕ  ನಿರ್ದೇಶಕ ವಿದ್ಯಾಶಂಕರ್ ಮಾತನಾಡಿ, ವಿದೇಶದಿಂದ ಎಲ್ಲ ಸಿನಿಮಾಗಳು ಆನ್ ಲೈನ್ ಮೂಲಕವೇ ಬಂದಿವೆ. ಚಲನಚಿತ್ರೋತ್ಸವಕ್ಕೆ ನೋಂದಣಿಯಾಗಿರುವ ಚಿತ್ರಗಳಲ್ಲಿ
30 ಚಲನಚಿತ್ರಗಳು ಪ್ರಥಮ ಬಾರಿಗೆ ಪ್ರದರ್ಶನಗೊಳ್ಳುತ್ತಿವೆ. ಮಹಿಳಾ ನಿರ್ದೇಶಕರ ವಾರ ವಿಭಾಗದಲ್ಲಿ 52 ನಿರ್ದೇಶಕಿಯರ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಸಂವಿಧಾನಿಕ ಮೌಲ್ಯ, ಮಹಿಳಾ ಸಬಲೀಕರಣ, ಸಾಮಾಜಿಕ ಮೌಲ್ಯ