India Post

ಬೀಜ ನಿಗಮದಿಂದ ಶೇರುದಾರರಿಗೆ 30% ಲಾಭಾಂಶ; ಎನ್.ಚಲುವರಾಯಸ್ವಾಮಿ ಘೋಷಣೆ

Posted by editor on
1st Image

ಬೆಂಗಳೂರು: ರಾಜ್ಯ ಬೀಜ ನಿಗಮದ ವತಿಯಿಂದ ಎಲ್ಲಾ ಶೇರುದಾರರಿಗೆ ಶೇಕಡಾ 30 ಲಾಭಾಂಶ ನೀಡಲು ನಿರ್ಧರಿಸಲಾಗಿದ್ದು, 8360 ಷೇರುದಾರರಿಗೆ 138 ಲಕ್ಷ ರೂ. ದೊರೆಯಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ರಾಜ್ಯದ ಬೀಜ ನಿಗಮದ ವತಿಯಿಂದ ಗುಲ್ಬರ್ಗಾದಲ್ಲಿ ಗೋಧಾಮು ನಿರ್ಮಾಣಕ್ಕೂ ಸಹ ಅನುಮೋದನೆ ನೀಡಲಾಗಿದೆ. ಕಳೆದ ವರ್ಷ 2 ಲಕ್ಷ ಕ್ವಿಂಟಾಲ್ ಬೀಜ ಉತ್ಪಾದನೆ ಗುರಿಯ ಬದಲಾಗಿ ಈ ವರ್ಷ 4 ಲಕ್ಷ ಕ್ವಿಂಟಾಲ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು 82 ಲಕ್ಷ ಹೆಕ್ಟರ್ ಬಿತ್ತನೆಯಾಗಿದೆ. 40 ಲಕ್ಷ ಹೆಕ್ಟೇರ್ ಕಟಾವು ಮಾಡಲಾಗಿದೆ. ಕಳೆದ 10 ದಿನಗಳಿಂದ ಸುರಿದ ತೀವ್ರ ಮಳೆಯಿಂದ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು ವರದಿ ತರಿಸಿಕೊಳ್ಳಲಾಗುತ್ತಿದೆ. ನಿಯಮಾನುಸಾರ ಪರಿಹಾರ ದೊರಯಲಿದೆ ಎಂದು ಅವರು ಮಾಹಿತಿ ನೀಡಿದರು.. ರಾಜ್ಯ ಕೃಷಿ ಇಲಾಖೆ ಕೇಂದ್ರದಿಂದ ಅತಿ ಹೆಚ್ಚು ಅನುದಾನವನ್ನು ಪಡೆದು ಅದನ್ನು ರೈತರಿಗೆ ವರ್ಗಾವಣೆ ಮಾಡಿದೆ ಎಂದರು. ಕೃಷಿಕರು ತಮ್ಮ ಸಂಪ್ರದಾಯಿಕ ಕೃಷಿಯ ಜೊತೆಗೆ ಸಮಗ್ರ ಕೃಷಿ ಬಗ್ಗೆ ಗಮನ ಹರಿಸಬೇಕು. ಸರ್ಕಾರದ ಯೋಜನೆಗಳ ಲಾಭವನ್ನು ಪಡೆದು ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಯ ಅನುಕೂಲಗಳನ್ನು ಅನುಸರಿಸಿ ಪ್ರಗತಿಪರ ರೈತರಾಗಿ ಪರಿವರ್ತನೆಯಾಗಬೇಕು. ಬೀಜ ನಿಗಮ ವತಿಯಿಂದಲೂ ರೈತರಿಗೆ ಹರಿವು ಮತ್ತು ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ ಇವೆಲ್ಲವನ್ನು ಸದ್ಬಳಕೆ ಮಾಡಿಕೊಂಡು ಅನುಕೂಲ ಪಡೆಯಬೇಕು ಎಂದು ಕರೆ ನೀಡಿದರು. ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ರಾಷ್ಟ್ರೀಯ ಬೀಜ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಅಹಮದ್ ರಾಜಾ, ಬೀಜ ನಿಗಮದ ವ್ಯಸ್ಥಾಪಕ ನಿರ್ದೇಶಕ ದೇವರಾಜ್, ಮತ್ತಿರರರು ಹಾಜರಿದ್ದರು.