ಕೊಪ್ಪಳದಲ್ಲಿ ಮಾ. 9ಕ್ಕೆ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ
Posted by editor on in Category
08
49

ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.
ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ. ಪ್ರಶಸ್ತಿಗಳ ಪಟ್ಟಿ ಇಂತಿದೆ: ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಕೆ.ಬಿ.ಜಗದೀಶ್, ಸಂಜೆವಾಣಿ, ಕೋಲಾರ ಶ್ರೀಮತಿ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಕವಿತ, ಸಂಯುಕ್ತ ಕರ್ನಾಟಕ ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ: ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು ಮೂಡಣ, ಹಾವೇರಿ ಪ್ರಶಸ್ತಿ: ಎಂ.ಚಿರಂಜೀವಿ, ಹಿರಿಯ ಪತ್ರಕರ್ತರು, ಹಾವೇರಿ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು: ರಂಗನಾಥ್ ಎಸ್ ಭಾರದ್ವಾಜ್- ಟಿವಿ9 ರಮಾಕಾಂತ್-ಟಿವಿ5 ಶ್ರೀನಿವಾಸ್-ಬೆಂಗಳೂರು. ಬಿ.ಪಿಳ್ಳರಾಜು- ಬೆಂಗಳೂರು ಗ್ರಾಮಾಂತರ. ಭಾಸ್ಕರ ರೈ ಕಟ್ಟ-ಮಂಗಳೂರು ಗುರುಶಾಂತ.ಎನ್. -ಬಳ್ಳಾರಿ ಎಸ್.ಎಂ.ಮನೋಹರ- ಹೊಸಪೇಟೆ, ವಿಜಯನಗರ. ಸಿ.ಬಿ.ಸುಬೇದಾರ್- ನರಗುಂದ, ಗದಗ