ಟ್ರಂಪ್ ವಿರುದ್ಧ ಅಧ್ಯಕ್ಷ ಒಬಾಮಾ ಗರಂ
Posted by Suddi Reporter on in Category
08
49

ವಾಷಿಂಗ್ಟನ್ : ಅಮೇರಿಕ ಅಧ್ಯಕ್ಷಿಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಇದೆ ಮೊದಲ ಬಾರಿಗೆ ಅಧ್ಯಕ್ಷ ಬರಾಕ್ ಒಬಾಮಾ ಗರಂ ಅಗಾಗಿದ್ದಾರೆ.
ಅಮೇರಿಕ ಅಧ್ಯಕ್ಷೀಯ ಚುನಾವನೆಯನ್ನೋದು ರಿಯಾಲಿಟಿ ಶೋ ಅಲ್ಲ. ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ರಂಜಿಸುವ ವೇದಿಕೆ ಅಲ್ಲ. ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ವಿವಾದಿತ ಉದ್ಯಮಿ ಹಿನ್ನೆಲೆಯನ್ನೊಮ್ಮೆ ತೆರೆದು ನೋಡಬೇಕಿದೆ ಎಂದು ಇದೆ ಹೇಳುವ ಮೂಲಕ ಡೊನಾಲ್ಡ್ ಟ್ರಂಪ್ ಗೆ ಟಾಂಗ್ ಕೊಟ್ಟಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಯ್ಕೆಯ ಬಗ್ಗೆ ನನಗೆ ಗೌರವವಿದೆ. ಆದ್ರೆ ಡೊನಾಲ್ಡ್ ಟ್ರಂಪ್ ಚುನಾವಣಾ ರ್ಯಾಲಿಗಲ್ಲಿ ಮಾತನಾಡುವುದನ್ನು ನೋಡಿದ್ರೆ ಅವರಿಗೆ ಅಧ್ಯಕ್ಷೀಯ ಚುನಾವಣೆಯ ಗಂಭೀರತೆ ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.