ಉಗ್ರರ ದಾಳಿಗೆ 8 ಜನ ಪೋಲೀಸರು ಬಲಿ
Posted by Suddi Reporter on in Category
08
49

ಏಕಾಏಕಿ ಗುಂಡಿನ ದಾಳಿ ನಡೆಸಿರುವ ಉಗ್ರಗಾಮಿಗಳು 8 ಜನ ಈಜಿಪ್ಟ್ ಪೋಲೀಸ್ ಪೇದೆಗಳನ್ನು ಹತ್ಯೆಗೈದಿರುವ ಘಟನೆ ಭಾನುವಾರ ದಕ್ಷಿಣ ಕೈರೋದ ಹೆಲ್ವನ್ ಜಿಲ್ಲೆಯಲ್ಲಿ ನಡೆದಿದೆ.
ಪಿಕ್ ಅಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪೋಸರನ್ನು ಅಡ್ಡಗಟ್ಟಿದ ಉಗ್ರಗಾಮಿಗಳ ತಂಡವೊಂದು ಏಕಾಏಕಿ ಗುಂಡಿ ಸುರಿಮಳೆಗರೆದಿದೆ. ಪ್ರನಾಮವಾಗಿ 8 ಜನ ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ.
ಈ ಹಿಂದೆಯೂ ಇಂತಹ ಅನೇಕ ಘಟನೆಗಳು ನಡೆದಿದ್ದು, ಉಗ್ರಗಾಮಿಗಳು ಸೇರಿದಂತೆ ದೇಶದ ಅನೇಕ ಕ್ರಿಮಿನಲ್ ಗುಂಪುಗಳು ಈ ರೀತಿಯ ಕೃತ್ಯಗಳನ್ನು ನಡೆಸಿವೆ ಎಂದು ಸ್ಪಷ್ಟಪಡಿಸಿದೆ.