ವಿರೋಧಿಗಳಿಂದ ತೊಂದರೆಯಾದರೆ ಮಾತ್ರ ಪರಮಾಣು ಬಳಕೆ : ಕಿಮ್ ಜಾನ್ ಉನ್
Posted by Suddi Reporter on in Category
08
49

ನಮಗೆ ವಿರೋಧಿಗಳಿಂದ ಯಾವುದೇ ತೊಂದರೆಯಾದರೆ ಖಂಡಿತ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಅವುಗಳನ್ನು ಬಳಸುವುದಿಲ್ಲ ಅಂತ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಉತ್ತರ ಕೋರಿಯಾದ ಆರ್ಥಿಕ ಪ್ರಗತಿಯ ಬಗ್ಗೆ ಕಿಮ್ ಜಾನ್ ಉನ್ ಗಮನ ಹರಿಸಿದ್ದು, ವಿದ್ಯುತ್ ಪೂರೈಕೆ ಸೇರಿದಂತೆ ಮುಂದಿನ 5 ವರ್ಷಗಲ್ಲಿ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ ಎಂದು ಸರ್ಕಾರದ ಅಧಿಕೃತ ಪತ್ರಿಕೆಯಾದ ರೋದಂಗ್ ಸಿನ್ನುನ್ ವರದಿ ಹೇಳಿದೆ.
ಅಮೇರಿಕ ಮತ್ತು ದಕ್ಷಿಣ ಕೋರಿಯಾದೊಂದಿಗೆ ಬದ್ಧ ವೈರತ್ವ ಕಟ್ಟಿಕೊಂಡಿರುವ ಕಿಮ್ ಜಾಂಗ್ ಉನ್ ಈ ಹಿಂದೆಯೂ ಇದೆ ರೀತಿಯ ಹೇಳಿಕೆಗಳನ್ನು ನೀಡಿದ ಉದಾಹರಣೆಗಳಿವೆ.