ಬಿಸಿಯೂಟದ ಕೊಠಡಿ ಮುಂದೆ ವಾಮಚಾರ
Posted by editor on in Category
08
49

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ತಯಾರಿಕಾ ಕೊಠಡಿಯ ಮುಂಭಾಗದಲ್ಲಿ ವಾಮಾಚಾರ ಮಾಡಲಾಗಿದೆ.
ಕೋಳಿಯ ತಲೆ ಕತ್ತರಿಸಿ ಎಕ್ಕದ ಎಲೆಯ ಮೇಲೆ ಕೋಳಿ ತಲೆ, ಬಳೆಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಇದರಿಂದ ಅಡುಗೆ ಸಿಬ್ಬಂದಿ, ಸ್ಥಳೀಯರು ಭಯಭೀತರಾಗಿದ್ದರುಸ್ಥಳ ಪರಿಶೀಲಿಸಿದ ಪುರಸಭೆ ಸದಸ್ಯ ನಂಜುಂಡಯ್ಯ ಶಾಲಾ ಅಡುಗೆ ಕೋಣೆಯ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಡುಗೆ ಸಿಬ್ಬಂದಿಗೆ ಧೈರ್ಯ ತುಂಬಿ ವಾಮಾಚಾರ ತೆರವುಗೊಳಿಸಲಾಯಿತು.