ಹೊಂಡಕ್ಕೆ ಬಿದ್ದ ಕಾರು, ಚಾಲಕ ಸುರಕ್ಷಿತ
Posted by editor on in Category
08
49

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ರಸ್ತೆಯ ಕತ್ತರಘಟ್ಟ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನೀರಿನ ಹೊಂಡಕ್ಕೆ ಶನಿವಾರ ರಾತ್ರಿ ಬಿದ್ದಿದೆ.
ಚಾಲಕ ಕುರ್ನೇನಹಳ್ಳಿಯ ನವೀನ್ ಕುಮಾರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಶನಿವಾರ ರಾತ್ರಿ ಸ್ವಗ್ರಾಮ ಕೊಮ್ಮೇನಹಳ್ಳಿಗೆ ಹೋಗುತ್ತಿದ್ದ ಮುಖಂಡ ಜಗದೀಶ್ ಕಾರು ಹೊಂಡಕ್ಕೆ ಬಿದ್ದಿರುವುದನ್ನು ಗಮನಿಸಿ ಚಾಲಕನನ್ನು ಅಪಾಯದಿಂದ ಪಾರು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.