ಕುವೆಂಪು ಪ್ರತಿಮೆ ಸ್ವಚ್ಚಗೊಳಿಸಿದ ಬಿಜೆಪಿ ನಾಯಕರು
Posted by editor on in Category
08
49

ಬೆಂಗಳೂರು: ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಕುವೆಂಪು ಉದ್ಯಾನದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಹಿರಿಯ ನಾಯಕ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಮೋಹನ್ ಚಾಲನೆ ನೀಡಿದರು.
ಉದ್ಯಾನವನದಲ್ಲಿನ ಕುವೆಂಪು ಪುತ್ಥಳಿ ಸ್ವಚ್ಛಗೊಳಿಸಿದರಲ್ಲದೇ ಸ್ಥಳೀಯರಿಗೆ ಘನ ತ್ಯಾಜ್ಯ ನಿರ್ವಹಣೆ ಜಾಗೃತಿ ಮೂಡಿಸುವ ಪುಸ್ತಕ ವಿತರಿಸಿದರು. ಮನೆಗಳಿಗೆ ತೆರಳಿ ಕಸದ ಬುಟ್ಟಿಗಳನ್ನು ವಿತರಿಸಿದರು. ಜತೆಗೆ ರಸ್ತೆ ಬದಿಯಲ್ಲಿದ್ದ ಕಸ ತೆರವುಗೊಳಿಸಿದರು. ಪೌರ ಕಾರ್ಮಿಕರನ್ನು ಮಾತನಾಡಿಸಿ ಅವರ ಸಮಸ್ಯೆ ಗಳನ್ನು ಆಲಿಸಿದರು. ವಿಧಾನಪರಿಷತ್ ಸದಸ್ಯೆ ತಾರಾ, ನಟ ಶಿವರಾಂ,ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಕಾರ್ಪೋರೇಟರ್ ಗಳು, ಕಾರ್ಯ ಕರ್ತರು ಹಾಜರಿದ್ದರು.