ಮೋದಿ ಮತ್ತೆ ಪ್ರಧಾನಿಯಾದರೆ ದೇಶಕ್ಕೆ ಕಂಟಕ: ಡಿಸಿಎಂ ಡಾ.ಜಿ. ಪರಮೇಶ್ವರ್
Posted by editor on in Category
08
49

ಬೆಂಗಳೂರು: ನಾಲ್ಕೂವರೆ ವರ್ಷದಲ್ಲಿ ಸುಳ್ಳಿನ ಸರಪಳಿ ಹೆಣೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬದಲಿಸದಿದ್ದರೆ ದೇಶ ಕಂಟಕ ಎದುರಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿ ಕಂಡಿಲ್ಲ. ಇಂದು ಗಾಂಧೀಜಿ ಹಾಗೂ ಮೋದಿ ಅವರ ವಾದ ನಡೆಯುತ್ತಿದೆ. ಗಾಂಧೀ ವಾದ ವಿಶ್ವಕ್ಕೆ ಮಾದರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಗಾಂಧಿ ವಾದ ಸಮಾನತೆ, ಸರ್ವಧರ್ಮ ಸಹಿಷ್ಣತೆ, ದೇಶದ ಅಭಿವೃದ್ಧಿ ಪ್ರತಿಪಾದನೆ ಮಾಡುತ್ತೆ. ಮೋದಿ ಅವರ ವಾದ ಈ ಎಲ್ಲದಕ್ಕೂ ವಿರೋಧವಾಗಿದೆ. ಧರ್ಮದ ನಡುವೆ ಕಂದಕ, ಅಸಮಾನತೆ ಸೃಷ್ಟಿ ಮಾಡುತ್ತಾರೆ. ಯಾವ ಧರ್ಮವನ್ನು ಸಹಿಸದ ಅವರ ವಾದ ಹೇಗೆ ಪ್ರಸ್ತುತ ಆಗುತ್ತದೆ?. ಕಾಂಗ್ರೆಸ್ ಗಾಂಧಿ ಅವರ ನೆರಳು ಬಿಟ್ಟು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಇವರ ವಾದ ಸದಾ ಪ್ರಸ್ತುತವಾಗಿದೆ ಎಂದರು. ಮೋದಿ ಪ್ರಧಾನಿಯಾದ ಬಳಿಕ ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ ಮೂಲಕ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿ, ಸಾಮಾನ್ಯರು ಕಷ್ಟ ಪಡುವಂತೆ ಮಾಡಿದ್ದಾರೆ. ಇಂಥವರು ಮತ್ತೊಮ್ಮೆ ಪ್ರಧಾನಿಯಾದರೆ ದೇಶ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.