ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಂಡ,ಎಚ್ಚರಿಕೆ

ಬೆಂಗಳೂರು: ಪೂರ್ವ ವಲಯದ ಸಾರ್ವಜನಿಕ ಸ್ಥಳ ಮತ್ತು ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಪೂರ್ವ ವಲಯ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ರವರ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಒಟ್ಟು 63 ಪ್ರಕರಣಗಳನ್ನು ದಾಖಲಿಸಿ 23.700 ರೂ ದಂಡ ವಿಧಿಸಿದೆ.
ಸಿ.ಎಚ್.ಎಂ.ರಸ್ತೆ, 100 ಅಡಿ ರಸ್ತೆ, 12ನೇ ಮುಖ್ಯ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಇಂದಿರಾನಗರ, 4ನೇ ಅಡ್ಡ ರಸ್ತೆ, ಹೆಚ್.ಆರ್.ಬಿ ಲೇಔಟ್, ಸರ್ವಜ್ಞನಗರ, ರೇಸ್ ಕೋರ್ಸ್ ರಸ್ತೆ, ಕೆ.ಜೆ.ಲೇಔಟ್, ಸಂಜಯನಗರ ಮುಖ್ಯ ರಸ್ತೆ ಮತ್ತಿತರ ಕಡೆ ದಾಳಿ ನಡೆಸಲಾಯಿತು.
ಹಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್ ಮಾರ್ಷಲ್ ಮತ್ತು ಪೊಲೀಸರ ಸಹಕಾರದೊಂದಿಗೆ ತಂಡಗಳನ್ನು ರಚಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಸಾರ್ವಜನಿಕರಿಗೆ ಹಾಗೂ ಬಿಡಿಬಿಡಿಯಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿ ಧೂಮಪಾನಕ್ಕೆ ಸಹಕಾರ ನೀಡುತ್ತಿದ್ದ ಉದ್ದಿಮೆದಾರರಿಗೆ ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಂಡ ವಿಧಿಸಲಾಯಿತು.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದರಿಂದ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಸಹಕರಿಸುವಂತೆ ತಿಳಿಸಲಾಯಿತು. ಈ ಎಚ್ಚರಿಕೆ ನಿರ್ಲಕ್ಷ್ಯಿಸಿ ಮತ್ತೆ ತಂಬಾಕು ಉತ್ಪನ್ನ ಮಾರಾಟ ಮಾಡಿದರೇ ಕಾಯ್ದೆಯಡಿ ಕ್ರಿಮಿನಲ್ ಮೊಖದ್ದಮೆ ಹೂಡಲಾಗುವುದು ಮತ್ತು ವ್ಯಾಪಾರ ಪರವಾನಗಿಯನ್ನು ರದ್ದು ಗೊಳಿಸಲಾಗು