ಮಾ.8ರಂದು ವಿಜಯಪುರಕ್ಕೆ ಹುಲುಸುರ ಗುರುಬಸವ ಮಠದ ಶಿವಾನಂದ ಮಹಾಸ್ವಾಮೀಜಿ ಆಗಮನ

ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಅಖಂಡ ಭಾರತ ಹಾಗೂ ನೇಪಾಳ ಪಾದಯಾತ್ರೆ ಕೈಗೊಂಡಿದ್ದ ಬಸವಕಲ್ಯಾಣ ತಾಲೂಕಿನ ಹುಲುಸುರ ಗುರುಬಸವ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾ. 8 ರಂದು ಬಸವ ಜನ್ಮಭೂಮಿ ವಿಜಯಪುರಕ್ಕೆ ಆಗಮಿಸಿಲಿದ್ದಾರೆ.
ವಿಜಯಪುರ ಜಿಲ್ಲಾ ರಾಷ್ಟ್ರೀಯ ಬಸವ ಸೇನೆ ಹಾಗೂ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಶ್ರೀಗಳಿಗೆ ಸ್ವಾಗತ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿಜಯಪುರದ ಮಠಪತಿ ಗಲ್ಲಿಯ ಖೇಡ್ ಕಾಲೇಜ್ ಆವರಣದ ಕಿರಿಟೇಶ್ವರ ಸಂಸ್ಥಾನ ಮಠದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಸೋಲಾಪುರ /ವಿಜಯಪುರ ಕಿರಿಟೇಶ್ವರ ಸಂಸ್ಥಾನ ಮಠದ ಶ್ರೀ ಸ್ವಾಮಿನಾಥ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಳೆದ ವರ್ಷ ಬಸವ ಜಯಂತಿಯಂದು ಬಸವಜ್ಯೋತಿ ಸದ್ಭಾವನಾ ಪಾದಯಾತ್ರೆ ಕೈಗೊಂಡಿದ್ದ ಸ್ವಾಮೀಜಿ ಭಾರತ ಹಾಗೂ ನೇಪಾಳ ಸೇರಿ ಸುಮಾರು 13000 ಕಿ. ಮೀ ಕ್ರಮಿಸಿದ್ದಾರೆ. 68 ಸಂವತ್ಸರ ದಾಟಿರುವ ಶ್ರೀ ಗಳು ಅಗಾಧ 13000 ಕಿ.ಮೀ ಪಾದಯಾತ್ರೆ ಕೈಗೊಂಡು ಬಸವಾದಿ ಶರಣರ ವಚನಗಳನ್ನು ಪ್ರಚಾರ ಮಾಡುತ್ತಿದ್ದಾರೆ.