ಪೈಪೋಟಿಯಿದ್ದರೂ ವಸ್ತುನಿಷ್ಠತೆ ಮರೆಯಬೇಡಿ: ಮಾಧ್ಯಮಗಳಿಗೆ ಗೋವಿಂದ ಕಾರಜೋಳ ಸಲಹೆ
Posted by editor on in Category
08
49

ಮಂಗಳೂರು: ಮಾಧ್ಯಮಗಳಿಂದ ವಸ್ತು ನಿಷ್ಟ ವರದಿಯನ್ನು ಸಮಾಜ ನಿರೀಕ್ಷಿಸುತ್ತದೆ. ಆದ್ದರಿಂದ ಎಷ್ಟೇ ಪೈಪೋಟಿಯಿದ್ದರೂಬ ವರದಿ ವಸ್ತು ನಿಷ್ಟವಾಗಿರಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ. ಕಾರಜೋಳ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ್ದ 35ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ದೇಶದಲ್ಲಿ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ರಕ್ಷಾ ಕವಚವಾಗಿದೆ. ಜನಾಭಿಪ್ರಾಯ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾದುದು. ಮಾಧ್ಯಮ ಸೇವೆಗಳಲ್ಲಿ ಸಂಪೂರ್ಣ ನಂಬಿಕೆ ಇದೆ. ಸಾರ್ವಜನಿಕರ ಹಕ್ಕು ಬಾಧ್ಯತೆಗಳ ಸಂರಕ್ಷಣೆಗೆ ಪತ್ರಕರ್ತರು ಕೈಗೊಂಡಿರುವ ಸೇವೆ ಯಶಸ್ವಿಯಾಗಲಿ. ಸಾರ್ವಜನಿಕ ಸೇವೆಗೆ ಹಲವಾರು ಪತ್ರಕರ್ತರು ಮಾರ್ಗದರ್ಶನ ಮಾಡಿದ್ದಾರೆ. ಮೊಹರೆ ಹನುಮಂತರಾಯರು, ಹುಯಿಲುಗೋಳ ನಾರಾಯಣ ರಾಯರು, ದಿವಾಕರ ರಂಗರಾವ್, ಸುರೇಂದ್ರ ದಾನಿ, ಖಾದ್ರಿ ಶಾಮಣ್ಣ, ಪಾಟೀಲ್ ಪುಟ್ಟಪ್ಪ ರಂತಹ ನಾಡಿನ ಹಿರಿಯ ಪತ್ರಕರ್ತರ ಸೇವೆ ಅವಿಸ್ಮರಣೀಯ. ಅವರಿಂದ ನಾನು ಪದರಭಾವಿತನಾಗಿದ್ದೇನೆ. ನಾಡಿನ ಐಕ್ಯತೆ, ಕನ್ನಡ ಭಾಷೆಯ ಸರ್ವತೋಮುಖ ಅಭಿವೃದ್ದಿ, ಸಾಂಸ್ಕೃತಿಕ ತಳಹದಿಯನ್ನು ಗುರಿಯಾಗಿಟ್ಟುಕೊಂಡು ಅವರು ಸೇವೆ ಸಲ್ಲಿಸಿದ್ದಾರೆ ಎಂದರು. ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕನಿಪ ಸಂಘದ ರಾಜ್ಯಾಧ್ಯಕ್ಷ ಶ ಶಿವಾನಂದ ತಗಡೂರು ಮತ್ತಿಯರರು ಉಪಸ್ಥಿತರಿದ್ದರು.