ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಹೊಟೇಲ್ ಪರಿಶೀಲನೆ: ಸ್ವಚ್ಚತೆಗೆ ಸೂಚನೆ
Posted by editor on in Category
08
49

ಚಿತ್ರದುರ್ಗ: ಕರೋನ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯ್ತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಹೋಟೇಲ್ ಮೇಲೆ ದಿಢೀರ್ ದಾಳಿ ನಡೆಸಿ ಸ್ವಚ್ಚತಾ ಕ್ರಮಗಳನ್ನು ಪರಿಶೀಲಿಸಿದರು.
ಚಿತ್ರದುರ್ಗ- ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ನೂರಾರು ಬಸ್ ಗಳು ನಿಲ್ಲುವ ಹಿರಿಯೂರಿನ ಆತಿಥ್ಯ ಮಿಡ್ವೇ ಪ್ಲಾಜಾವನ್ನು ಪರಿಶೀಲನೆ ನಡೆಸಿದ ನಂತರ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡರು. ಕೈತೊಳೆಯಲು ಸ್ಯಾನಿಟೈಜರ್ ಇಡದೇ ಸೋಪ್ ಆಯಿಲ್ ಓಪನ್ ಇಡಲಾಗಿತ್ತು. ಊಟ -ತಿಂಡಿ ಸರಬರಾಜು ಮಾಡುವವರು ಸೂಕ್ತ ಕೈಗವಸು ಮತ್ತು ಟೋಪಿ ಧರಿಸಿರಲಿಲ್ಲ. ಆಹಾರ ಪದಾರ್ಥಗಳನ್ನು ಸರಿಯಾಗಿ ಮುಚ್ಚದೇ ತೆರೆದು ಇಡಲಾಗಿತ್ತು. ಇದನ್ನು ಗಮನಿಸಿದ ಅನಂತ್ ಅವರು ಸಂಜೆಯೊಳಗೆ ಅವ್ಯವಸ್ಥೆ ಸರಿಪಡಿಸುವಂತೆ ಆಡಳಿತ ಮಂಡಳಿಗೆ ತಾಕೀತು ಮಾಡಿದರು.