ಡಿಕೆಶಿಗೆ ಸಂಕಷ್ಟ: ಸಹೋದರರ ಮನೆ ಮೇಲೆ ಸಿಬಿಐ ದಾಳಿ
Posted by editor on in Category
08
49

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.
ಮುಂಜಾನೆ 6 ಗಂಟೆಗೆ ಸದಾಶಿವ ನಗರದಲ್ಲಿರುವ ಶಿವಕುಮಾರ್ ಅವರ ಮನೆ ಸೇರಿದಂತೆ ಸಂಸದ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರ ಮನೆ ಸೇರಿ 15 ಕಡೆ ಸಿಬಿಐ ತಂಡ ದಾಳಿ ನಡೆಸಿದೆ. ಕನಕಪುರದಲ್ಲಿಯೂ ಪರಿಶೀಲನೆ: ಕನಕಪುರದ ನಿವಾಸಗಳಲ್ಲೂ ಸಿಬಿಐ ದಾಳಿ ನಡೆದಿದೆ. ಇಂದು ಇಡೀ ದಿನ ಪರಿಶೀಲನೆ ನಡೆಯಲಿದೆ. ಡಿ.ಕೆ.ಶಿವಕುಮಾರ್ ಬಿಟ್ಟು ಮನೆಯಲ್ಲಿದ್ದ ಎಲ್ಲರನ್ನ ಹೊರಗೆ ಕಳುಹಿಸಿ ಸಿಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ರಾಮನಗರದ ದೊಡ್ಡಆಲಹಳ್ಳಿಯಲ್ಲಿರುವ ಡಿಕೆಶಿ ನಿವಾಸದ ಮೇಲೆಯೂ ದಾಳಿ ನಡೆದಿದೆ.