ಕರೋನಾ ಸೋಂಕು ಹಿನ್ನೆಲೆ: ಹುಟ್ಟುಹಬ್ಬ ಆಚರಿಸದಿರಲು ಎಂಬಿ ಪಾಟೀಲ್ ಮನವಿ
Posted by editor on in Category
08
49

ವಿಜಯಪುರ: ಕರೋನಾ ಸೋಂಕಿನ ಕಾರಣ ಅ. 7ರಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಬಾರದೆಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ್ ಅಭಿಮಾನಿಗಳಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಕೆರೆಗಳಲ್ಲಿ ಗಂಗಾ ಪೂಜೆ ಹೊರತುಡಿಸಿ, ಬೇರೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವದಿಲ್ಲ. ಸಾರ್ವಜನಿಕರು, ಅಭಿಮಾನಿಗಳನ್ನು ಭೇಟಿ ಮಾಡುವುದಿಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಮನವಿ ಮಾಡಿದ್ದರೂ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮತ್ತೆ ಸಿದ್ಧತೆಯಲ್ಲಿ ತೊಡಗಿರುವದು ಗಮನಕ್ಕೆ ಬಂದಿದೆ. ಕರೋನಾ ಸೋಂಕಿನ ಗಂಭೀರ ಪರಿಸ್ಥಿತಿಅರ್ಥ ಮಾಡಿಕೊಂಡು ಶಿಸ್ತಿನಿಂದ ವರ್ತಿಸಬೇಕು. ಜನ್ಮದಿನ ಸಂದರ್ಭದಲ್ಲಿ ಜಾಹೀರಾತು, ಬ್ಯಾನರ್ ಅಳವಡಿಕೆ, ಹೂ-ಗುಚ್ಚ, ಹೂ-ಹಾರ ಸೇರಿದಂತೆ ಯಾವುದೇ ಆಚರಣೆ ಬೇಡ ಎಂದು ಈಗಾಗಲೇ ತಿಳಿಸಲಾಗಿದೆ. ಈ ಕುರಿತು ಮತ್ತೆ ಸ್ಪಷ್ಟಪಡಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.