ವೈಜ್ಞಾನಿಕ ಆಸ್ತಿ ತೆರಿಗೆ ಸಂಗ್ರಹ ನೀತಿ ಜಾರಿಗೊಳಿಸಲು ಎನ್ ಆರ್ ರಮೇಶ್ ಮನವಿ
Posted by editor on in Category
08
49

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ತೆರಿಗೆಯನ್ನು ಶೇ.25 ಹೆಚ್ಚಿಸುವ ಸಂಬಂಧ ಆಯುಕ್ತರು ಸಲ್ಲಿಸಿರುವ ಪ್ರಸ್ತಾವನೆ ತಿರಸ್ಕರಿಸಿ ವೈಜ್ಞಾನಿಕವಾಗಿ ತೆರಿಗೆ ಸಂಗ್ರಹ ಮಾಡುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷ ಎನ್ .ಆರ್. ರಮೇಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಒಟ್ಟಾರೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬದಲು ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸ್ತವವಾಗಿ ಇರುವಂತಹ ಎಲ್ಲ ಅಪಾರ್ಟ್‌ಮೆಂಟ್ ಗಳು, ಕೈಗಾರಿಕಾ ಕಟ್ಟಡಗಳು, ಟೆಕ್ನೋ ಪಾರ್ಕ್ ಗಳು, ಮಾಲ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳು, ಐಟಿ- ಬಿಟಿ ಸಂಸ್ಥೆಗಳು, ಪೇಯಿಂಗ್ ಗೆಸ್ಟ್ ಹಾಸ್ಟೆಲ್ ಗಳು, ಟೆಲಿಕಾಂ ಟವರ್ ಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಖಾಸಗಿ ಶಾಲಾ - ಕಾಲೇಜುಗಳು, ಕಲ್ಯಾಣ ಮಂಟಪಗಳು, ಪಾರ್ಟಿ ಹಾಲ್ ಗಳು, ಸ್ಟಾರ್ ಹೋಟೆಲ್ ಗಳು ಮತ್ತು ಲಾಡ್ಜ್ ಗಳ ನೈಜ ಒಟ್ಟು ನಿರ್ಮಿತ ಪ್ರದೇಶಗಳನ್ನು ವೈಜ್ಞಾನಿಕವಾಗಿ ಅಳತೆ ಹಾಕಿ ವಾಸ್ತವ ಆಸ್ತಿ ತೆರಿಗೆ ವಿಧಿಸಿದರೆ ವಾರ್ಷಿಕವಾಗಿ 7ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಬಹುದು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.