ಬಿಬಿಎಂಪಿಗೆ ಹೊರೆಯಾಗಿದ್ದಾರೆ ಹೆಚ್ಚುವರಿ ಅಧಿಕಾರಿಗಳು
Posted by editor on in Category
08
49

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಅನಗತ್ಯ ವೆಚ್ಚಗಳು ಬರಗಾಲದಲ್ಲಿ ಅಧಿಕ ಮಾಸದಂತೆ ಕಾಡುತ್ತಿವೆ. ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರೇ ಮಾಹಿತಿ ಬಹಿರಂಗಗೊಳಿಸಿದ್ದಾರೆ.
81 ಅಧಿಕಾರಿಗಳು ಅನವಶ್ಯಕವಾಗಿ ಬಿಬಿಎಂಪಿಯಲ್ಲಿ ಬೀಡುಬಿಟ್ಟಿದ್ದು, ವಾರ್ಷಿಕವಾಗಿ 40 ಕೋಟಿ ಖರ್ಚಾಗುತ್ತಿದೆ. ಆದ್ದರಿಂದ ಈ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಬೇಕೆಂದು ಎನ್ ಆರ್.ರಮೇಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬಿಬಿಎಂಪಿಯ ಪ್ರಮುಖ 4 ಇಲಾಖೆಗಳಾದ ನಗರ ಯೋಜನೆ ಇಲಾಖೆ, ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ, ಯೋಜನೆ (ಕೇಂದ್ರ) ಇಲಾಖೆ ಮತ್ತು ಬೃಹತ್ ಮಳೆನೀರುಗಾಲುವೆ ಇಲಾಖೆಗಳಲ್ಲಿ ಮಂಜೂರಾತಿ ಹುದ್ದೆಗಳಿಗಿಂತಲೂ 73 ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ಸುಮಾರು 3 ಕೋಟಿ ರೂಪಾಯಿ ಪಾಲಿಕೆಗೆ ಹೊರೆಯಾಗುತ್ತಿದೆ. ಪಾಲಿಕೆಯ 8 ವಲಯಗಳಲ್ಲಿ ಹಿಂದೆ ಇದ್ದ 8 ಎಸಿಎಫ್ ಗಳ ಜೊತೆಗೆ 8 ಡಿಸಿಎಫ್ ಗಳನ್ನು ಅನವಶ್ಯಕವಾಗಿ ನಿಯೋಜನೆ ಮಾಡಿರುವುದರಿಂದ ಪಾಲಿಕೆಗೆ ಪ್ರತಿ ತಿಂಗಳು 60 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ಅನವಶ್ಯಕವಾಗಿ ವೆಚ್ಛವಾಗುತ್ತಿದೆ, ಈ ಅನವಶ್ಯಕ ಹುದ್ದೆಗಳಲ್ಲಿರುವ 81 ಅಧಿಕಾರಿಗಳನ್ನು ಅವರವರ ಮಾತೃ ಇಲಾಖೆಗಳಿಗೆ ವಾಪಸ್ಸು ಕಳುಹಿಸಬೇಕು ಹಾಗೂ ಆ ಮೂಲಕ ಪಾಲಿಕೆಗೆ ವಾರ್ಷಿಕವಾಗಿ ಅಧಿಕವಾಗಿ ವೆಚ್ಛವಾಗುತ್ತಿರುವ ಸುಮಾರು 40 ಕೋಟಿ ರೂ. ಉಳಿತಾಯ ಮಾಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ