ಇಂದು ಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ಕೋವಿಡ್ ತಪಾಸಣೆ
Posted by editor on in Category
08
49

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬಿಬಿಎಂಪಿ ವತಿಯಿಂದ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಅ.6ರಂದು ಉಚಿತ ಕೋವಿಡ್-19 ಪರೀಕ್ಷೆ ನಡೆಯಲಿದ್ದು, ನಿವಾಸಿಗಳು ಮನೆಯ ಹತ್ತಿರ ಈ ಸೌಲಭ್ಯ ಪಡೆಯಬಹುದಾಗಿದೆ.
ಕೋವಿಡ್-19 ರೋಗಲಕ್ಷಣಗಳು ಇದ್ದರೆ ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೂ ಪರೀಕ್ಷೆ ಮಾಡಿಸಿಕೊಳ್ಳಬಹುದು ಶಾಸಕಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ. ಪಟ್ಟಾಭಿರಾಮನಗರ (ವಾರ್ಡ್ 168)ದ ಜಯದೇವ ಆಸ್ಪತ್ರೆ ಆವರಣದಲ್ಲಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಾಲಜಿ, ಜಯನಗರ ಪೂರ್ವ (ವಾರ್ಡ್ 170) ಜಯದೇವ ಆಸ್ಪತ್ರೆ, ಬನ್ನೇರುಘಟ್ಟ ಮುಖ್ಯ ರಸ್ತೆ, ಜೆ.ಪಿ ನಗರ (ವಾರ್ಡ್ 177)ದ ಶ್ರೀ ತಿರುಮಲಗಿರಿ ದೇವಸ್ಥಾನ, 9ನೇ ಅಡ್ಡ, 80 ಅಡಿ ರಸ್ತೆ, 2 ನೇ ಹಂತ, ಸಾರಕ್ಕಿ (ವಾರ್ಡ್ 178)ಯ ನಂದಿನಿ ಹೋಟೆಲ್ ಹತ್ತಿರ, 24 ನೇ ಮುಖ್ಯ ರಸ್ತೆ, 6 ನೇ ಹಂತ, ಸಿಂಧೂರ ಕನ್ವೆನ್ಷನ್ ಸೆಂಟರ್,15 ನೇ ಕ್ರಾಸ್, ಸಾರಕ್ಕಿ, 1 ನೇ ಹಂತ, ಜೆ.ಪಿ.ನಗರ ಹಾಗೂ ಶಾಕಾಂಬರಿ ನಗರ (ವಾರ್ಡ್ 179)ದ ಮೋರ್ ಸೂಪರ್ ಮಾರ್ಕೆಟ್ ಹತ್ತಿರ, 4 ನೇ ಕ್ರಾಸ್ ರಸ್ತೆ, ಸಂಗಮ್ ಸರ್ಕಲ್, 8 ನೇ ಬ್ಲಾಕ್, ಜಯನಗರ ಇಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಯನಗರ ಶಾಸಕರ ಸಹಾಯವಾಣಿ : 9241669999 ಸಂಪರ್ಕಿಸಲು ಕೋರಲಾಗಿದೆ.