ದೇಶಪ್ರೇಮವನ್ನು ಜಗತ್ತಿಗೇ ಸಾರಿದ ಸ್ವಾಮಿ ವಿವೇಕಾನಂದರು: ಪಿ.ರಾಜೀವ್
Posted by editor on in Category
08
49

ಬೆಂಗಳೂರು: ನಾವೆಲ್ಲರೂ ಒಂದಲ್ಲ ಒಂದು ಕ್ಷಣದಲ್ಲಿ ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಉತ್ಸಾಹ, ಶಕ್ತಿ ಮತ್ತು ದೇಶಪ್ರೇಮಗಳನ್ನು ತಮ್ಮ ಜೀವನದ ಉದ್ದಕ್ಕೂ ತಮ್ಮ ತತ್ವವನ್ನಾಗಿ ಜಗತ್ತಿಗೇ ಸಾರಿದವರು ಎಂದರು. ಸ್ವಾಮಿ ವಿವೇಕಾನಂದರು ಪ್ರತಿ ಹಂತದಲ್ಲೂ ಅನೇಕ ಸವಾಲುಗಳನ್ನು ಬದುಕಿನ ಉದ್ದಕ್ಕೂ ಎದುರಿಸಿದವರು. ಅವರು ಅಧ್ಯಾತ್ಮದ ಮೇರು ಪರ್ವತವಿದ್ದಂತೆ; ಅವರಿಂದ ಜೀವನಪ್ರೀತಿಯನ್ನು ಕಲಿಯಬಹುದು ಎಂದು ವಿಶ್ಲೇಷಿಸಿದರು. ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ವಿಧಾನಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿ ಸ್ವಾಮಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತಿತರರು ಇದ್ದರು.