ನಾಳೆ ಶ್ರೀ ರಾಮ ಕಪ್ ಕ್ರಿಕೆಟ್ ಪಂದ್ಯಾವಳಿ
Posted by editor on in Category
08
49

ಬೆಂಗಳೂರು: ಅಯೋಧ್ಯಯಲ್ಲಿ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಅಂಗವಾಗಿ ವಿಜಯನಗರದ ಬಿಜಿಎಸ್ ಆಟದ ಮೈದಾನದಲ್ಲಿ ಜ.22ರಂದು ಬೆಳಿಗ್ಗೆ 9 ರಿಂದ ಶ್ರೀ ರಾಮ ಕಪ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಶ್ರೀ ರಾಮ ನವಮಿ ಹಮ್ಮಿಕೊಳ್ಳಲಾಗಿದೆ.
ವಿಜಯನಗರ ಶಾಸಕ ಎಂ ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಒಟ್ಟು 10 ತಂಡಗಳು ಆಡುತ್ತಿದ್ದು, ಮೊದಲನೇ ಬಹುಮಾನ ₹ 50 ಸಾವಿರ ಹಾಗೂ ಎರಡನೆಯ ಬಹುಮಾನ ₹25 ಸಾವಿರ ನೀಡಲಾಗುವುದು.