ಆಸ್ತಿ ತೆರಿಗೆ ಜತೆಯೇ ತ್ಯಾಜ್ಯ ಶುಲ್ಕ ಸಂಗ್ರಹ ಪ್ರಮಾಣಪತ್ರ ಸಲ್ಲಿಕೆಗೆ ಮನವಿ
Posted by editor on in Category
08
49

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರಿಂದ (ವಾಣಿಜ್ಯ,ಸಾಂಸ್ಥಿಕ ಸೇರಿ)ಬಳಕೆದಾರರ ಶುಲ್ಕ(ಸೇವಾ ಶುಲ್ಕ)ವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸುವ ಕುರಿತು ಬಿಬಿಎಂಪಿ ನಿರ್ಣಯಿಸಿದ್ದು, ಅದರಂತೆ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರಮಾಣ ಪತ್ರ ಸಲ್ಲಿಸಲು ಮನವಿ ಮಾಡಲಾಗಿದೆ.ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿನ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು(ವಾಣಿಜ್ಯ ಸಾಂಸ್ಥಿಕ/ಬೃಹತ್ ತ್ಯಾಜ್ಯ ಉತ್ಪಾದಕರು) ಪ್ರಕಟಣೆ ಹೊರಡಿಸಿದ 30 ದಿನದೊಳಗೆ ನೋಟರಿ ಪ್ರಮಾಣ ಪತ್ರ/ಅಫೀಡವಿಟ್ (QR Codeಗಳನ್ನು ಸ್ಕ್ಯಾನ್ ಮಾಡುವ ಮುಖಾಂತರ ಅಥವಾ ವೆಬ್ಸೈಟ್ ಮುಖಾಂತರ ಡೌನಲೋಡ್ ಮಾಡಿ), ಭರ್ತಿ ಮಾಡಿ ಸಲ್ಲಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಪ್ರಕಟಣೆ ಹೊರಡಿಸಿದೆ. ಈ ಕೆಳಗಿನ ಲಿಂಕ್ ಬಳಸಿ ಹಾಗೂ ಪಾಲಿಕೆಯ ವೆಬ್ಸೈಟ್(www.bbmp.gov.in)ನಿಂದ ನಿರ್ದಿಷ್ಟ ನಮೂನೆಯನ್ನು (ರೂ.100/-ರ ಇ-ಮುದ್ರಾಂಕ ಪೇಪರ್) ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಮತ್ತು ಮುಖ್ಯ ಅಭಿಯಂತರರು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ, #30/1, 1ನೇ ಮಹಡಿ, ಯುಎನ್ಐ ಕಟ್ಟಡ, ತಿಮ್ಮಯ್ಯರಸ್ತೆ, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ವಸಂತ್ ನಗರ, ಬೆಂಗಳೂರು-560052ರವರ ಕಚೇರಿಗೆ ಸಲ್ಲಿಸುವಂತೆ ಕೋರಿದೆ.