ಕ್ರಿಸ್ತು ಜಯಂತಿ ಕಾಲೇಜು ಕನ್ನಡ ವಿಭಾಗದಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
Posted by editor on in Category
08
49

ಬೆಂಗಳೂರು: ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಮೆರಿಕಾದ ಕನ್ನಡ ಸಾಹಿತ್ಯ ರಂಗ ಸಂಸ್ಥೆಗಳ ಸಹಯೋಗದಲ್ಲಿ ”ಕನ್ನಡ ಶಿಷ್ಟ ಪರಂಪರೆ ಮತ್ತು ಜಾನಪದ ಲೋಕ” ಕುರಿತು *ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ.17ರಂದು ಹಮ್ಮಿಕೊಳ್ಳಲಾಗಿದ್ದು, ಈ ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಮೌಲ್ಯಯುತ ಸಂಶೋಧನ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅಧ್ಯಾಪಕರು, ಸಂಶೋಧಕರು ಹಾಗೂ ಪಿಜಿ-ಯುಜಿ ವಿದ್ಯಾರ್ಥಿಗಳು ಈ ವಿಷಯಗಳನ್ನು ಕೇಂದ್ರೀಕರಿಸಿ ಪ್ರಬಂಧಗಳನ್ನು ಸಿದ್ಧಪಡಿಸಿ ಕಳುಹಿಸಬಹುದು. ವಿಚಾರ ಸಂಕಿರಣದ ಆಶಯಕ್ಕೆ ಸೂಕ್ತವಾದ ಸಂಶೋಧನಾ ಪ್ರಬಂಧವನ್ನು ಕಳುಹಿಸಬಹುದು. ಮೊದಲಿಗೆ ಸಾರಲೇಖವನ್ನು 250 ಪದಗಳ ಮಿತಿಯಲ್ಲಿ ಕಳುಹಿಸುವುದು. ಸಾರಲೇಖ ಆಯ್ಕೆಯಾದ ನಂತರ ಪೂರ್ಣ ಪ್ರಬಂಧವನ್ನು 3ಸಾವಿರ ಪದಗಳ ಮಿತಿಯಲ್ಲಿ ನುಡಿ ತಂತ್ರಾಂಶದಲ್ಲಿ (ನುಡಿ 01ಇ, ಗಾತ್ರ 13, ಸಾಲಿನ ಅಂತರ 1.5) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್‌ಫೈಲ್‌ನಲ್ಲಿ ಕಳುಹಿಸುವುದು. ಸರಿಯಾಗಿ ತಿದ್ದುಪಡಿಯಾಗದ ಪ್ರಬಂಧಗಳನ್ನು ಸ್ವೀಕರಿಸುವುದಿಲ್ಲ. ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು ISBN ನಮೂದಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ವಿಚಾರ ಸಂಕಿರಣದ ದಿನ ಜ.17 ರಂದು ಪ್ರಮಾಣಪತ್ರದೊಂದಿಗೆ ಪುಸ್ತಕ ನೀಡಲಾಗುವುದು. ಸಾರಲೇಖವನ್ನು ಕಳುಹಿಸುವ ಕೊನೆಯ ದಿನ ಅ.20. ಪೂರ್ಣ ಪ್ರಬಂಧವನ್ನು ಸಲ್ಲಿಸಲು ಕೊನೆ ದಿನ ನ.10.ಪ್ರಬಂಧವನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ : kjksp@kristujayanti.com* ಹೆಚ್ಚಿನ ವಿವರಗಳಿಗಾಗಿ ವಿಚಾರಸಂಕಿರಣದ ಕೈಪಿಡಿ ಗಮನಸಬಹುದು ಜತೆಗೆ ವಾಟ್ಸಾಪ್ ಗ್ರೂಪಿಗೆ ಸೇರಬಹುದು: https://chat.whatsapp.com/ESGHto5M8gLEM6NymDzN5X