ಕ್ರಿಸ್ತು ಜಯಂತಿ ಕಾಲೇಜು ಕನ್ನಡ ವಿಭಾಗದಿಂದ ಸಂಶೋಧನ ಪ್ರಬಂಧಗಳಿಗೆ ಆಹ್ವಾನ
Posted by editor on in Category
08
49

ಬೆಂಗಳೂರು: ಕ್ರಿಸ್ತು ಜಯಂತಿ ಕಾಲೇಜು ಕನ್ನಡ ವಿಭಾಗದಿಂದ ಸಂಶೋಧನ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.ಆಸಕ್ತಿಯುಳ್ಳ ಅಧ್ಯಾಪಕರು, ಸಂಶೋಧಕರು ಹಾಗೂ ಪಿಜಿ-ಯುಜಿ ವಿದ್ಯಾರ್ಥಿಗಳು ಈ ವಿಷಯಗಳನ್ನು ಕೇಂದ್ರೀಕರಿಸಿ ಪ್ರಬಂಧಗಳನ್ನು ಸಿದ್ಧಪಡಿಸಿ ಕಳುಹಿಸಬಹುದು.
ಪ್ರಕೃತಿ ಮತ್ತು ಜಾನಪದ ಸಂಸ್ಕೃತಿ, ಆದಿಮ ಸಂಸ್ಕೃತಿ ಮತ್ತು ಆಧುನಿಕ ಸಂಸ್ಕೃತಿ, ಜಾನಪದ ಲೋಕ ಮತ್ತು ಕನ್ನಡ ಸಂಸ್ಕೃತಿ, ಹಳಗನ್ನಡ ಸಾಹಿತ್ಯದಲ್ಲಿ ಜಾನಪದ ಲೋಕ, ನಡುಗನ್ನಡ ಸಾಹಿತ್ಯದಲ್ಲಿ ಜಾನಪದ ಲೋಕ, ವಚನಕಾರರು ಮತ್ತು ಜಾನಪದ ವಿವೇಕ, ಹೊಸಗನ್ನಡ ಸಾಹಿತ್ಯದಲ್ಲಿ ಜಾನಪದ ಲೋಕ, ಚರಿತ್ರೆ ಮತ್ತು ಜಾನಪದ ಲೋಕ, ಶಾಸ್ತ್ರೀಯ ಪಠ್ಯಗಳು ಮತ್ತು ಜಾನಪದ ಜಗತ್ತು, ಜಾನಪದ-ಶಿಷ್ಟ ಪರಂಪರೆಯಲ್ಲಿ ಶ್ರಮಿಕವರ್ಗ, ಜಾನಪದ-ಶಿಷ್ಟ ಕಲೆಗಳು ಮತ್ತು ಕಲಾವಿದರು, ಕನ್ನಡ ಜಾನಪದ ಮತ್ತು ಪಾಶ್ಚಾತ್ಯ ವಿದ್ವಾಂಸರು, ಕನ್ನಡ ಜಾನಪದ ಮತ್ತು ದೇಸಿ ವಿದ್ವಾಂಸರು, ಶಿಷ್ಟಕಾವ್ಯಗಳು ಮತ್ತು ಜಾನಪದ ಕಾವ್ಯಗಳು, ಕನ್ನಡ ರಂಗಭೂಮಿ ಮತ್ತು ಜಾನಪದ, ಜಾನಪದ ಕಥನಗಳ ಇಂಗ್ಲೀಷ್ ಅನುವಾದ, ಕನ್ನಡದ ಕಣ್ಣಲ್ಲಿ ವಿಶ್ವ ಜಾನಪದ, ವಿಶ್ವದ ಕಣ್ಣಲ್ಲಿ ಕನ್ನಡ ಜಾನಪದ, ಜಾನಪದ-ಶಿಷ್ಟ ಪರಂಪರೆಯಲ್ಲಿ ಮಹಿಳೆ, ಜಾನಪದ-ಶಿಷ್ಯ ಸಾಹಿತ್ಯ: ತೌಲನಿಕ ನೋಟ, ಕನ್ನಡ ಸಾಹಿತ್ಯ: ಜಾನಪದ ಮತ್ತು ಶಾಸ್ತ್ರೀಯ ಮುಖಾಮುಖಿ, ಶಿಷ್ಟಕಾವ್ಯಮೀಮಾಂಸೆ ಮತ್ತು ಜಾನಪದ ಕಾವ್ಯಮೀಮಾಂಸೆ, ಕನ್ನಡ ಸಿನೆಮಾಗಳಲ್ಲಿ ಜಾನಪದ ಲೋಕ ದರ್ಶನ. ಈ ವಿಷಯಗಳಷ್ಟೇ ಅಲ್ಲದೆ, ವಿಚಾರ ಸಂಕಿರಣದ ಆಶಯಕ್ಕೆ ಸೂಕ್ತವಾದ ಸಂಶೋಧನಾ ಪ್ರಬಂಧವನ್ನು ಕಳುಹಿಸಬಹುದು.