ಕೆರೆಗಳ ಸ್ವಚ್ಛತಾ ಕಾರ್ಯ ತ್ವರಿತಗೊಳಿಸಿ: ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್
Posted by editor on in Category
08
49

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 8 ಕೆರೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಹಂತ-ಹಂತವಾಗಿ ಎಲ್ಲಾ ಕೆರೆಗಳಲ್ಲೂ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ವಿಶೇಷ ಆಯುಕ್ತೆ(ಅ.ಪ.ಹ.ವೈ) ಪ್ರೀತಿ ಗೆಹ್ಲೋಟ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿಯ ವ್ಯಾಪ್ತಿಯ ಎಲ್ಲಾ ವಲಯಗಳ ಕೆರೆಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ. ಅಮೃತಹಳ್ಳಿ, ಕೌದೇನಹಳ್ಳಿ ಹಾಗೂ ಕೆಳಗಿನ ಭೈರಸಂದ್ರ ಕೆರೆಗಳಿಗೆ ಖುದ್ದು ಭೇಟಿ ನೀಡಿ, ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಅಧಿಕಾರಿಗಳಿಗೆ ಸೂಚೆನೆ ನೀಡಿದ್ದರು. ಎಲ್ಲಾ ಕೆರೆಗಳ ಅಂಗಳದ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ, ಕೆರೆ ಏರಿಯಾದಲ್ಲಿ ಕಳೆ ತೆಗೆಯುವುದು, ಕೆರೆ ನೀರಿನಲ್ಲಿ ಜೊಂಡು ತೆಗೆಯುವುದು, ಒಳಹರಿವು ಸ್ವಚ್ಛತೆಗೊಳಿಸುವ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನವು ಈ ವಾರ ಪೂರ್ತಿ ನಡೆಯಲಿದ್ದು, ಹೆಚ್ಚು ಸಿಬ್ಬಂದಿ ನಿಯೋಜಿಸಿಕೊಂಡು ಸರಿಯಾಗಿ ಸ್ವಚ್ಛತೆ ಮಾಡಲು ಸೂಚಿಸಿದರು. 8 ಕೆರೆಗಳಲ್ಲಿ ಸ್ವಚ್ಛತೆ ಪೂರ್ಣ: ಪಾಲಿಕೆ ವ್ಯಾಪ್ತಿಯಲ್ಲಿ ಬರುವ 8 ವಲಯಗಳಲ್ಲೂ ಒಂದೊಂದು ಕೆರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಅದರಂತೆ ಬೈರಸಂದ್ರ, ನಾಯಂಡನಹಳ್ಳಿ, ಗೌಡನಪಾಳ್ಯ, ಕೌದೇನಹಳ್ಳಿ, ದೊರೆಕೆರೆ, ಅಗರ, ಅಮೃತಹಳ್ಳಿ, ಚೊಕ್ಕಸಂದ್ರ ಹಾಗೂ ಉಲ್ಲಾಳ ಕರೆ ಸೇರಿದಂತೆ 8 ಕೆರೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದೆ. ಅದಕ್ಕಾಗಿ 175 ಸಿಬ್ಬಂದಿ, 13 ಟ್ರ್ಯಾಕ್ಟರ್ ಹಾಗೂ 4 ಜೆಸಿಬಿಗಳನ್ನು ಬಳಸಿಕೊಳ್ಳಲಾಗಿದೆ.