ಬಿಬಿಎಂಪಿ ಉದ್ಯಾನವನಗಳಲ್ಲಿ 634 ಇಂಗು ಗುಂಡಿ ನಿರ್ಮಾಣ: ಪ್ರೀತಿ ಗೆಹ್ಲೋಟ್ ಮಾಹಿತಿ
Posted by editor on in Category
08
49

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗದೆ ಅಲ್ಲೇ ಸಂಗ್ರಹಿಸಿ ಇಂಗಿಸುವ ಮತ್ತು ಅಂರ್ತಜಲ ಮಟ್ಟ ಹೆಚ್ಚಿಸುವ ಸಲುವಾಗಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವಿಶೇಷ ಆಯುಕ್ತೆ(ಅ.ಪ.ಹ.ವೈ) ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 1280 ಉದ್ಯಾನವನಗಳಿದ್ದು, ಇಂಗು ಗುಂಡಿಗಳನ್ನು ನಿರ್ಮಿಸಬಹುದಾದ ಉದ್ಯಾನವನಗಳಲ್ಲಿ ಹಂತ-ಹಂತವಾಗಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲು ಪಾಲಿಕೆ ತೋಟಗಾರಿಕಾ ವಿಭಾಗವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ, 2024-25ನೇ ಸಾಲಿನಲ್ಲಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಸರಿಸುಮಾರು ಸಾವಿರ ಇಂಗು ಗುಂಡಿಗಳನ್ನು ಉದ್ಯಾನವನಗಳಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಉದ್ಯಾನವನಗಳಲ್ಲಿ ಬಿದ್ದ ಮಳೆ ನೀರು ಅಲ್ಲೇ ಸಂಗ್ರಹಿಸುವ ಮತ್ತು ಇಂಗಿಸುವ ಸಲುವಾಗಿ ಹಾಗೂ ಅಂರ್ತಜಲ ಮಟ್ಟ ಹೆಚ್ಚಿಸಲು 12 ಅಡಿ ಉದ್ದ ಹಾಗೂ 5 ಅಡಿ ಅಗಲ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಿ ಅದರಲ್ಲಿ ಸುಮಾರು 4000 ಲೀ. ಮಳೆ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. *ವೈಜ್ಞಾನಿಕ ಇಂಗು ಗುಂಡಿ ನಿರ್ಮಾಣ:* ಉದ್ಯಾನವನಗಳಲ್ಲಿ ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದ್ದು, ನೀರು ಹೋಗುವ ದ್ವಾರಕ್ಕೆ ಕಬ್ಬಿಣದ ಪರದೆ ಅಳವಡಿಸಲಾಗಿದೆ. ಇದರಿಂದ ಕಸ-ಕಡ್ಡಿ ಗುಂಡಿಗೆ ಸೇರುವುದನ್ನು ತಡೆದು ಶೇ. 80 ರಷ್ಟು ಪ್ರಮಾಣದ ನೀರು ಇಂಗುಗುಂಡಿಗೆ ಸೇರುವಂತೆ ಮಾಡಲಾಗಿದೆ. 12 X 5 ಸುತ್ತಳತೆಯಲ್ಲಿ 4 ಅಡಿ ಸುತ್ತಳತೆಯ ಸಿಮೆಂಟ್ ರಿಂಗ್ ಅಳವಡಿಸಿದ್ದು, ಸುತ್ತಲೂ ಆಳದಿಂದ ಭೂಮಿಯ ಮೇಲ್ಫದರದವರೆಗೆ 40 ಎಂಎಂ ಜಲ್ಲಿಕಲ್ಲು ತುಂಬಲಾಗಿದೆ.