ರತನ್ ಟಾಟಾ ಅವರ ನಿಧನಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ ಸಂತಾಪ
Posted by editor on in Category
08
49

ಬೆಂಗಳೂರು: ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ ಸಮೂಹದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಅವರ ನಿಧನ ದುಃಖವನ್ನುಂಟು ಮಾಡಿದೆ. ಅವರ ಭೌತಿಕ ಅನುಪಸ್ಥಿತಿಯು ಭಾರತ ಅಲ್ಲದೇ ಕರ್ನಾಟಕಕ್ಕೂ ಬಹುದೊಡ್ಡ ನಷ್ಟ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಸಂತಾಪ ವ್ಯಕ್ತಪಡಿಸಿದ್ದಾರೆ
ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಟಾಟಾ ಸಮೂಹವು ಕರ್ನಾಟಕದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದು, ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿದೆ. ರತನ್ ಟಾಟಾ ಕೂಡ ಉದ್ಯಮಶೀಲತೆಯನ್ನು ಉನ್ನತ ಮಟ್ಟದ ಮೌಲ್ಯಗಳ ಜತೆ ಪ್ರತಿನಿಧಿಸುತ್ತಿದ್ದರು. ಅವರು ಸದಾ ದೇಶ ಮತ್ತು ಸಮಾಜದ ಹಿತವನ್ನು ಕೂಡ ಪರಿಗಣಿಸುತ್ತಿದ್ದರು ಎಂದು ಅಗಲಿದ ಉದ್ಯಮಿಯ ಗುಣಗಾನ ಮಾಡಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಬಾಲಕೃಷ್ಣ ಪ್ರಾರ್ಥಿಸಿದ್ದಾರೆ.