ಮಾರ್ಗಸೂಚಿ ಪಾಲಿಸದ ಪಿಜಿ ಕೇಂದ್ರಗಳಿಗೆ ಬೀಗ: ವಿಶೇಷ ಆಯುಕ್ತ ಸುರಳ್ಕರ್ ಕಿಶೋರ್
Posted by editor on in Category
08
49

ಬೆಂಗಳೂರು: ಬಿಬಿಎಂಪಿ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿ ಕೇಂದ್ರ ಗಳನ್ನು ಮುಚ್ಚಲಾಗುತ್ತಿದೆ ಎಂದು *ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಅಧಿಕೃತ ಹಾಗೂ ಅನಧಿಕೃತ ಪಿ.ಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾರ್ಗಸೂಚಿಗಳನ್ನು ಪಾಲಿಸದ ಕೇಂದ್ರಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 2193 ಅಧಿಕೃತ ಪಿಜಿಗಳು: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2193 ಅಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1578 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಪಾಲಿಸುತ್ತಿವೆ. 615 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಈ ಸಂಬಂಧ ಇಲ್ಲಿಯವರೆಗೆ 1011 ಅಧಿಕೃತ ಪಿ.ಜಿ. ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ. 2320 ಅನಧಿಕೃತ ಪಿಜಿಗಳು: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2320 ಅನಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1674 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಪಾಲಿಸುತ್ತಿರುತ್ತಿವೆ. 646 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸಿಲ್ಲ. ಈಗಾಗಿ ಇಲ್ಲಿಯವರೆಗೆ 2320 ಅಧಿಕೃತ ಪಿ.ಜಿ. ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಾರ್ಗಸೂಚಿ ಅನುಸರಿಸದ 21 ಪಿ.ಜಿ.ಗಳಿಗೆ ಬೀಗ: ಉದ್ದಿಮೆ ಪರವಾನಿಗೆ ಪಡೆಯದ ಹಾಗೂ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ ಉದ್ದಿಮೆಗಳಿಗೆ 2/3 ಬಾರಿ ನೋಟೀಸ್ ನೀಡಿದ್ದರೂ ಕೂಡಾ ಯಾವುದೇ ಕ್ರಮಗಳನ್ನು ಪಾಲಿಸಿಲ. ಈ ಸಂಬಂಧ ಪಿಜಿಗಳನ್ನು ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅಧಿಕೃತ ಪಿಜಿ ಹಾಗೂ 20 ಅನಧಿಕ�