16ರಂದು ಪಿಜಿ ಮಾಲೀಕರ ಜಾಗೃತಿ ಸಮಾವೇಶ
Posted by editor on in Category
08
49

ಬೆಂಗಳೂರು: ವಿಜಯನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಹತ್ತಿರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದಿಂದ ಅ.16ರಂದು ಪಿಜಿ ಮಾಲೀಕರ ಜಾಗೃತಿ ಸಮಾವೇಶವನ್ನು ಪಿಜಿ ಮಾಲೀಕರ ವತಿಯಿಂದ ಆಯೋಜಿಸಲಾಗಿದೆ.
ಬಿಬಿಎಂಪಿ ವಿಶೇಷ ಆಯುಕ್ತರು ಸೇರಿದಂತೆ ಎಂಟು ವಲಯಗಳ ಮುಖ್ಯ ಆರೋಗ್ಯ ಅಧಿಕಾರಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ಪಿಜಿ ಮಾಲೀಕರು ಈ ಸಭೆಯಲ್ಲಿ ಭಾಗವಹಿಸಲಿದ್ದು.ಪಿಜಿ ಮಾರ್ಗಸೂಚಿ ಹಾಗೂ ನಿಯಮ ಬದ್ಧವಾಗಿ ಪಿಜಿ ಗಳನ್ನು ನಡೆಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಒಕ್ಕೂಟದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ತಿಳಿಸಿದ್ದಾರೆ.