ಬಿಬಿಎಂಪಿಯಿಂದ 17ರಂದು ನಾಯಿಗಳ ಉತ್ಸವ (Kukur Tihar): ಸುರಳ್ಕರ್ ವಿಕಾಸ್ ಕಿಶೋರ್
Posted by editor on in Category
08
49

ಬೆಂಗಳೂರು: ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಬಿಬಿಎಂಪಿ ನಾಯಿಗಳ ಉತ್ಸವ(Kukur Tihar)ವನ್ನು ಅ. 17ರಂದು ಆಚರಿಸಲು ನಿರ್ಧರಿಸಿದೆ.
ಸಹವರ್ತಿನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಬಿಬಿಎಂಪಿಯ ಪಶುಸಂಗೋಪನೆ ವಿಭಾಗವು *COEXISTENCECAMPUONLOCALITY* & *#BITEFREELOCALITY* ಎಂಬ ಯೋಜನೆಯಡಿ ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸಲು ಹಾಗೂ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಂಡಿದೆ. ಪೌರಕಾರ್ಮಿಕರ ಸಹಯೋಗ: ಇದೇ ಉತ್ಸವದಂದು, ಬಿಬಿಎಂಪಿಯು ಆಯಾ ವಾರ್ಡಿನ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಸಮುದಾಯದ ನಾಯಿಗಳಿಗೆ ಆಹಾರ ನೀಡುವಲ್ಲಿ ಸಹಾಯ ಮಾಡಲು 4 ವಾರ್ಡ್‌ಗಳ ಪೌರಕಾರ್ಮಿಕರ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಲಿದೆ. ಈ ಯೋಜನೆಯು ಮುಂದುವರೆದಂತೆ, ನಾವು ಪ್ರತಿ ವಾರ್ಡಿನಲ್ಲಿಯೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ, ಉಳಿದ ಆಹಾರವನ್ನು ಸದುಪಯೋಗಿಸುವ ನಿರ್ಧಾರ ಪಾಲಿಕೆಯು ಮಾಡಿದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡಲಾಗುತ್ತದೆ. *ಪ್ರಾಣಿ ಪಾಲಕರ ನೋಂದಣಿ:* ನಿಮ್ಮ ವಾರ್ಡ್‌ನಿಂದ ಸ್ವಯಂಸೇವಕರಾಗಿ ಮುಂಬರುವ ಎಲ್ಲಾ ಉಪಕ್ರಮಗಳಲ್ಲಿ ಭಾಗಿಯಾಗಲು ನೀವು ಉತ್ಸುಕರಾಗಿದ್ದರೆ, ದಯವಿಟ್ಟು ಕೆಳಗಿನ ಕ್ಯೂ-ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಮೂನೆಯನ್ನು 15ನೇ ಅಕ್ಟೋಬರ್ 2024ರ ಒಳಗೆ ಭರ್ತಿ ಮಾಡಿ. ಹೆಚ್ಚಿನ ಮಾಹಿತ