ದಸರಾ ಸ್ತಬ್ಧ ಚಿತ್ರ: ಚಾಮರಾಜನಗರಕ್ಕೆ 3ನೇ ಸ್ಥಾನ: ಡಿಸಿ ಶಿಲ್ಪಾ ಹರ್ಷ
Posted by editor on in Category
08
49

ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಚಾಮರಾಜನಗರಕ್ಕೆ ತೃತೀಯ ಸ್ಥಾನ ದೊರೆತಿದೆ.
ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಪ್ರವಾಸಿಗರು ಹಾಗೂ ದಸರಾ ವೀಕ್ಷಣೆ ಮಾಡುತ್ತಿದ್ದ ಜನರಿಗೆ ಬಹಳ ಆಕರ್ಷಣೆಯಾಗಿತ್ತು. ಇದರಲ್ಲಿ ಚಾಮರಾಜನಗರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ ದೊರಕಿದೆ. ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸ್ತಬ್ಧ ಚಿತ್ರದಲ್ಲಿ "ಸೋಲಿಗರ ಸೊಗಡು, ಒಮ್ಮೆ ನೀ ಬಂದು ನೋಡು" ಎಂಬದನ್ನು ಪ್ರತಿಬಿಂಬಿಸಲಾಗಿತ್ತು. ಈ ಸ್ತಬ್ಧ ಚಿತ್ರ ತಯಾರಿಸಿದ ಕಲಾವಿದರ ಶ್ರಮ ನಿಯೋಜಿತ ಅಧಿಕಾರಿಗಳ ಶಿಸ್ತಿನ ಶ್ರಮದಿಂದ ಪ್ರಶಸ್ತಿ ಮೂಡಿ ಬಂದಿದೆ. ಆದ್ದರಿಂದ ದಸರಾ ಉಪ ಸಮಿತಿ ಹಾಗೂ ಪ್ರತಿಯೊಬ್ಬರಿಗೂ ಚಾಮರಾಜನಗರ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಆಕರ್ಷಣೀಯವಾಗಿತ್ತು. ಎಲ್ಲಾ ಜಿಲ್ಲೆಗಳ ಸ್ಥಾಪಿಸಿದ ಚಿತ್ರಗಳು ಪಾಲ್ಗೊಂಡಿದ್ದವು.