ಅತಿ ವಿರಳ “ಅಪ್ಲ್ಯಾಸ್ಟಿಕ್ ರೋಗ: ಆಫ್ರಿಕಾ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Posted by editor on in Category
08
49

ಬೆಂಗಳೂರು: ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿ ಅತಿ ವಿರಳ“ಅಪ್ಲ್ಯಾಸ್ಟಿಕ್ ರಕ್ತ ಹೀನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ಮೆಡಿಕಲ್ ಮತ್ತು ಹೆಮಟೋ ಆಂಕೊಲಾಜಿಯ ಹಿರಿಯ ನಿರ್ದೇಶಕಿ ಡಾ. ನೀತಿ ರೈಜಾದಾ, ಹೆಮಟೋ ಆಂಕೊಲಾಜಿ ಸಮಾಲೋಚಕ ಡಾ ನಿಶಿತ್ ಓಜ್ಹಾ, ಪೀಡಿಯಾಟ್ರಿಕ್ ಹೆಮಟೋ ಆಂಕೊಲಾಜಿ ಸಲಹೆಗಾರ ಡಾ ತನುಶ್ರೀ ಪಾಲ್ ತಂಡ ಚಿಕಿತ್ಸೆ ನೀಡಿದೆ.
ಈ ಕುರಿತು ವಿವರಿಸಿದ ಡಾ. ನೀತಿ ರೈಜಾದಾ, ಆಫ್ರಿಕಾ ಮೂಲದ ಮೈಕೆಲ್ ಎಂಬ ಬಾಲಕನು 2 ತಿಂಗಳಿನಿಂದ ತೀವ್ರ ಜ್ವರ, ಆಯಾಸದಿಂದ ಬಳಲುತ್ತಿದ್ದರು, ಅಷ್ಟೇ ಅಲ್ಲದೆ, ಆತನ ಬಲ ಕಿವಿಯಿಂದ ರಕ್ತಸ್ತ್ರಾವವಾಗುತ್ತಿತ್ತು. ಅವರ ಕುಟುಂಬ ಆಫ್ರಿಕಾದಲ್ಲಿನ ಎಲ್ಲಾ ಆಸ್ಪತ್ರೆಗಳಿಗೆ ತೋರಿಸಿದರೂ ಸಮಸ್ಯೆ ತಿಳಿಯಲಿಲ್ಲ. ಕೊನೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಇಲ್ಲಿ ಆ ಬಾಲಕನ ಸಂಪೂರ್ಣ ತಪಾಸಣೆ ಬಳಿಕ, ಅತಿ ವಿರಳ ಅಪ್ಲ್ಯಾಸ್ಟಿಕ್ ರಕ್ತ ಹೀನತೆ ಆಗಿರುವುದು ತಿಳಿದುಬಂತು. ಆತನಿಗೆ ಹ್ಯಾಪ್ಲೋಡೆಂಟಿಕಲ್ ಸ್ಟೆಮ್ ಸೆಲ್ ಕಸಿ ಮಾಡುವ ಅವಶ್ಯಕತೆ ಅನಿವಾರ್ಯವಾಗಿತ್ತು. ಆದರೆ, ಬಾಲಕನ ರಕ್ತದ ಗುಂಪಿಗೆ ಹೊಂದುವ ಸ್ಟೆಮ್‌ಸೆಲ್ ಸಿಗಲಿಲ್ಲ. ಈ ಮಧ್ಯೆ ಬಾಲಕನ ಹಿರಿಯ ಸಹೋದರಿಯೇ ತನ್ನ ತಮ್ಮನಿಗೆ ಹ್ಯಾಪ್ಲೊಂಡೆಂಟಿಕಲ್ ದಾನ ಮಾಡಲು ಮುಂದಾದರು. ಆದರೆ, ಬಾಲಕನಿಗೆ ಬಲಕಿವಿ ಸೋಂಕಿನಿಂದ ಸೋರುತ್ತಿದ್ದ ಕಾರಣ, ಮೊದಲು ಕಿವಿ ಶಸ್ತ್ರಚಿಕಿತ್ಸೆ ಮುಂದಾಗಬೇಕಾಯಿತು. ಬಾಲಕನ ಬಲ ಕಾರ್ಟಿಕಲ್ ಮಾಸ್ಟೊಡೆಕ್ಟಮಿ (ಕಿವಿ ಸುತ್ತ ಇರುವ ಸೋಂಕಿನ ಅಂಗಾಂಶ) ತೆಗೆದು ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಬಳಿಕ ಬಾಲಕನಿಗೆ ಹ್ಯಾಪ್ಲೋಡೆಂಟಿಕಲ್ ಸ್ಟೆಮ್ ಸೆಲ್ ಕಸಿ ಯಶಸ್ವಿಯಾಗಿ ಮಾಡಲಾಯಿತು. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದರು