ಉದ್ಯೋಗದಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಿ: ಶಾಸಕ ಕೆ. ಗೋಪಾಲಯ್ಯ
Posted by editor on in Category
08
49

ಬೆಂಗಳೂರು: ಕೆಲಸ ಖಾಲಿ ಇರುವ ಕಡೆ ಅಂಗವಿಕಲರಿಗೆ ಸರ್ಕಾರ ಉದ್ಯೋಗವನ್ನು ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ ಆಗ್ರಹಿಸಿದರು.
ನಂದಿನಿ ಲೇಔಟ್ ನ ಶಂಕರನಗರ ಆಟದ ಮೈದಾನದಲ್ಲಿ ಡಾ. ನವೀನ ಗೌಡ ಅವರು ಕಾಂತ ಕ್ಲಿನಿಕ್ ವತಿಯಿಂದ ಆಯೋಜಿಸಿದ್ದ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಕಲಚೇತನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವಂತಹ ಇಂತಹ ಕಾರ್ಯಕ್ರಮಗಳು ಪ್ರತಿ ವರ್ಷವೂ ನಡೆಯಬೇಕು. ಕಾಂತ ಕ್ಲಿನಿಕ್ ಉತ್ತಮವಾದ ಕಾರ್ಯಕ್ರಮ ಆಯೋಜಿಸಿದೆ. ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದವು ಯಶಸ್ವಿಯಾಗಲಿ ಇದರ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯದ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು. ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ಫ್ರೀಡಂ ಟಿವಿ ಮುಖ್ಯಸ್ಥ ನಾಗರಾಜ್, ಡಾ. ನಾಗೇಂದ್ರ ಮತ್ತಿತರರು ಇದ್ದರು.