ರಾಯಚೂರಿನ ಮಾವಿನಕೆರೆ ಸಮಗ್ರ ಅಭಿವೃದ್ದಿಗೆ ಜಂಟಿ ಯೋಜನೆ: ಸಚಿವ ಎನ್ ಎಸ್ ಭೋಸರಾಜ
Posted by editor on in Category
08
49

ಬೆಂಗಳೂರು: ಸ್ವಚ್ಚ, ಸುಂದರ ಹಾಗೂ ಅತ್ಯಾಕರ್ಷಕವಾಗಿ ರಾಯಚೂರಿನ ಮಾವಿನಕೆರೆ / ಆಮ್‌ತಲಾಬ್ ಅಭಿವೃದ್ದಿಗೊಳಿಸಲು ಸಣ್ಣ ನೀರಾವರಿ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಮುಂದಾಗಿದ್ದು, ಅಭಿವೃದ್ದಿಯ ನೀಲಿ ನಕ್ಷೆಯನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ತಿಳಿಸಿದರು.
ರಾಯಚೂರು ಜಿಲ್ಲಾಡಳಿತ, ನಗರಾಭಿವೃದ್ದಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಮಾವಿನಕೆರೆಯ ಸಮಗ್ರ ಅಭಿವೃದ್ದಿಯ ಬ್ಲೂಪ್ರಿಂಟ್‌ಗಳ ಪ್ರಾತ್ಯಕ್ಷಿಕೆ ಪರಿಶೀಲಿಸಿದರು. ರಾಯಚೂರು ಮಾವಿನಕೆರೆ ಸುಮಾರು 115 ಏಕರೆ ಪ್ರದೇಶದ ವಿಸ್ತಾರ ಹೊಂದಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಹಾಗೂ ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕೆರೆಯನ್ನು ಅಭಿವೃದ್ದಿಗೊಳಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆರೆಯನ್ನು ಅಭಿವೃದ್ದಿಗೊಳಿಸಲು ಅಗತ್ಯ ಅನುದಾನ ಕ್ರೋಢೀಕರಿಸಲಾಗುತ್ತಿದೆ. ಕೆರೆಯನ್ನು ಸರ್ವತೋಮುಖ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕನ್ಸಲ್ಟೆಂಟ್ ಏಜನ್ಸಿ ಈಗಾಗಲೇ ನೀಲ ನಕ್ಷೆ ತಯಾರು ಮಾಡಿದ್ದು, ಅಭಿವೃದ್ದಿಯ ಯೋಜನೆಯನ್ನು ತಯಾರಿಸಿದೆ. ಕೆರೆಯ ಸರ್ವತೋಮುಖ ಅಭಿವೃದ್ದಿ: ಐತಿಹಾಸಿಕ ನಗರವಾಗಿರುವ ರಾಯಚೂರಿನ ಸೌಂದರ್ಯವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕೆರೆಯ ಸರ್ವತೋಮುಖ ಅಭಿವೃದ್ದಿ ಬಹಳ ಅಗತ್ಯವಾಗಿದೆ. ಕೆರೆ ಒತ್ತುವರಿಯನ್ನು ತಡೆಯುವುದು, ನಗರದ ಜನರಿಗೆ ಅನುಕೂಲವಾಗುವಂತೆ, ಕೆರೆ ಸೌಂದರ್ಯವನ್ನು ಆಸ್ವಾದಿಸುವಂತೆ ಅಭಿವೃದ್ದಿಕರಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೆರೆಯ ದಂಡೆಯನ್ನು ಆಕರ್ಷಣೆಯ ಕೇಂದ್ರವನ್ನಾಗಿಸುವ ನಿಟ್ಟಿ