World Post

ಚಾತುರ್ಮಾಸದಲ್ಲಿ ಸವಿತಾ ಸಮಾಜಕ್ಕೆ ಆಶೀರ್ವಚನ: ಮಾಜಿ ಅಧ್ಯಕ್ಷ ನರೇಶ್‌ಕುಮಾರ್

Posted by editor on in Category 49
1st Image

ಬೆಂಗಳೂರು: ನವರಾತ್ರಿ ವೇಳೆ ಶೃಂಗೇರಿ ಶಾರದೆಯ ಸನ್ನಿಧಿಯಲ್ಲಿ ಸವಿತಾ ಸಮಾಜದವರಿಂದ ಮಂಗಳವಾದ್ಯ ಸೇವೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸ್ವಾಮೀಜಿಗಳು ಒಪ್ಪಿಗೆ ನೀಡಿದ್ದಾರೆ. ಇದೇ ರೀತಿ ಮುಂಬರುವ ಚಾತುರ್ಮಾಸದಲ್ಲಿ ಒಂದು ದಿನ ಸವಿತಾ ಸಮಾಜದ ಬಂಧುಗಳಿಗೆ ಆಶೀರ್ವಚನ ನೀಡಲು ಸ್ವಾಮೀಜಿಗಳು ಮುಂದಾಗಿದ್ದಾರೆ ಎಂದು ಸವಿತಾ ಸವಿತಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್. ನರೇಶ್‌ ಕುಮಾರ್‌ ಹೇಳಿದರು.

ಚಾಮರಾಜಪೇಟೆಯ ಶಂಕರಪುರದ ಶೃಂಗೇರಿ ಮಠದಲ್ಲಿ ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠಾಧೀಶ ಶಂಕರಭಾರತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ, ಶೃಂಗೇರಿ ಸ್ವಾಮೀಜಿಯವರು ಇತಿಹಾಸದಲ್ಲಿ ಮೊದಲ ಬಾರಿಗೆ ಸವಿತಾ ಸಮಾಜಕ್ಕೆ ವಿಶೇಷವಾಗಿ ನೀಡಿದ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಾತುರ್ಮಾಸದಲ್ಲಿ ಗುರು ದರ್ಶನ ಮಾಡುವುದು ವಿಶೇಷವಾದದ್ದು. ಒಂದು ದಿನ ವಿಶೇಷ ದರ್ಶನ ಮಾಡಿ ಮಂತ್ರಾಕ್ಷತೆ ಪಡೆದುಕೊಂಡು ಹೋದರೆ ಅಭಿಷ್ಟ ಸಿದ್ಧಿಗೆ ನೆರವಾಗುತ್ತದೆ. ಈ ಎಲ್ಲಾ ಕ್ರಮಗಳು ನಮ್ಮ ಸಮುದಾಯಕ್ಕೆ ಬಹಳ ಆಶಾದಾಯಕ ಬೆಳವಣಿಗೆಗಳಾಗಿವೆ. ಸಮುದಾಯದ ಬಗ್ಗೆ ಸಮಾಜದಲ್ಲಿ ಇರುವಂತಹ ಅಭಿಪ್ರಾಯವನ್ನು ಬದಲಿಸುವುದು, ಒಳ್ಳೆಯ ಅಭಿಪ್ರಾಯ ಬೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಡೆಪ್ಯೂಟಿ ತಹಶೀಲ್ದಾರ್‌ ನಂದೀಶ್‌, ಎಸಿಪಿ ನಾರಾಯಣಸ್ವಾಮಿ, ಅಡ್ವೊಕೇಟ್‌ ನರಸಿಂಹರಾಜು, ಇನ್ಸ್‌ಪೆಕ್ಟರ್‌ ವಿಶ್ವನಾಥ್‌, ಸವಿತಾ ಸಮುದಾಯದ ಮುಖಂಡರಾದ ಕಿರಣ್‌ ಸಂಪತ್‌ ಕುಮಾರ್‌, ಕನ್ನಡ ಹೋರಾಟಗಾರ ಸಾಮ್ರಾಟ್‌ ಮಂಜು, ಸವಿತಾ ಸಮುದಾಯದ ಪ್ರಮುಖ ಮುಖಂಡರು ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಸಾವಿರಾರು ಜನರು ಆಶೀರ್ವಚನ ಪಡೆದರು.
  1. Lorem idivsum dolor sit amet, consectetur adipisicing elit. Sapiente, repellendus, omnis, ullam fugit repudiandae reiciendis velit ad consequuntur porro laudantium delectus nulla nemo assumenda sunt culpa voluptatum deleniti dolore fugiat.
    08 February; 2014
    • Lorem idivsum dolor sit amet, consectetur adipisicing elit. Sapiente, repellendus, omnis, ullam fugit repudiandae reiciendis velit ad consequuntur porro laudantium delectus nulla nemo assumenda sunt culpa voluptatum deleniti dolore fugiat.
      08 February; 2014
  2. Lorem idivsum dolor sit amet, consectetur adipisicing elit. Sapiente, repellendus, omnis, ullam fugit repudiandae reiciendis velit ad consequuntur porro laudantium delectus nulla nemo assumenda sunt culpa voluptatum deleniti dolore fugiat.